ಲಂಡನ್‌ನಲ್ಲಿರುವ ಅಂಬೇಡ್ಕರ್ ನಿವಾಸವನ್ನು ಭಾರತ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದಕ್ಕೆ ಸಂಬ0ಧಿಸಿದ ಪ್ರಕರಣದಲ್ಲಿ ಭಾರತ ಗೆಲುವಿನ ಪತಾಕೆ ಹಾರಿಸಿದೆ. ಅಲ್ಲದೆ ಭಾರತದ ಸಂವಿಧಾನ ಶಿಲ್ಪಿ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೆಲೆಸಿದ್ದ ನಿವಾಸವನ್ನು ಸಾರ್ವಜನಿಕ ವಸ್ತು ಸಂಗ್ರಹಾಲಯ ಮಾಡಲು ಭಾರತ ಮುಂದಾಗಿದೆ.
ಅ0ಬೇಡ್ಕರ್ ಮನೆ ಮ್ಯೂಸಿಯಂ ಆಗಿ ಪರಿವರ್ತನೆ.
ಇಂಗ್ಲೆ0ಡ್‌ನ ರಾಜಧಾನಿ ಲಂಡನ್‌ನ ಪ್ರಿಮ್‌ರೋಸ್ ಹಿಲ್ ಪ್ರದೇಶದಲ್ಲಿ
ಹಲವಾರು ಸೆಲೆಬ್ರಿಟಿಗಳು ನೆಲೆಸಿದ್ದಾರೆ. ಹಾಗಾಗಿ ಪ್ರದೇಶ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಇದೇ ಪ್ರದೇಶದಲ್ಲಿ ೧೯೨೧-೨೨ರಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಕೂಡ ವಾಸವಿದ್ದರು. ಈ ನಿವಾಸವನ್ನು ೨೦೧೫ ರಲ್ಲಿ ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಸುಮಾರು ೧೨೫ ಕೋಟಿ ರೂಪಾಯಿಗೆ ಖರೀದಿಸಿ ಮ್ಯೂಸಿಯಂ ಆಗಿ ಪರಿವರ್ತಿಸುವ ಯೋಜನೆ ಹಾಕಿಕೊಂಡಿತ್ತು.
೨೦೧೮ ರಲ್ಲಿ ಯೋಜನಾ ಪಿಂಚಣಿ ಉಲ್ಲಂಘನೆ ಆಗಿದೆ ಎಂದು ಈ ಯೋಜನೆಯ ವಿರುದ್ಧ ನೋಟಿಸ್ ಹೊರಡಿಸಲಾಗಿತ್ತು. ಈ ನೋಟಿಸ್ ಅನ್ನು ಭಾರತ ಸರ್ಕಾರದ ಪರವಾಗಿ ಸಿಂಘಾನಿಯಾದ ಜನೀವನ್ ಜಾನ್ ಮತ್ತು ತಂಡ ಪ್ರಶ್ನಿಸಿತ್ತು. ಅದಕ್ಕಾಗಿ ಪ್ರಕರಣದ ತನಿಖಾಧಿಕಾರಿಯಾಗಿ ಇನ್‌ಸ್ಪೆಕ್ಟರ್ ಕೆ. ವಿಲಿಯಮ್ಸ್ ಅವರನ್ನು ನೇಮಿಸಲಾಗಿತ್ತು. ಕಳೆದ ಸಪ್ಟೆಂಬರ್ ೨೪ ರಿಂದ ಅಕ್ಟೋಬರ್ ೧೧ ರವರೆಗೆ ತನಿಖೆ ನಡೆಸಿದ ಕೆ. ವಿಲಿಯಮ್ಸ್, ಡಿಸೆಂಬರ್ ೪ ರಂದು ವರದಿ ನೀಡಿದ್ದರು. ಅಂಬೇಡ್ಕರ್‌ರವರ ವಾಸದ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುವಂತೆ ಇನ್‌ಸ್ಪೆಕ್ಟರ್ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಒಪ್ಪಿಕೊಂಡು ಮಾರ್ಚ್ ೧೨ ರಂದು ಪುರಸ್ಕರಿಲಾಗಿತ್ತು.
ಇದೀಗ ಅಂಬೇಡ್ಕರ್ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲು ಒಪ್ಪಿಗೆ ಸಿಕ್ಕಿರುವ ಕಾರಣಕ್ಕೆ ಭಾರತ ಸರ್ಕಾರ ಸಂತಸ ವ್ಯಕ್ತಪಡಿಸಿದೆ.
ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ.
ಇನ್ನು ಸಾಲದ ಸಮಸ್ಯೆಗಳ ಚಿಂತೆ ಬೇಡ. ಈ ಮೂರು ದಿನ, ಹೋಗಿ ಅವನನ್ನು ನೋಡಿ. ಹೆಚ್ಚು ತೊಂದರೆ ಕೊಡುವ ಸಾಲದ ಹೊರೆಯೂ ಮಾಯವಾಗುತ್ತದೆ. ಇಂದು ನಾವು ಕೀ...







