ಜೂನ್ 16ರಿಂದ ಭಾರತ – ಇಂಗ್ಲೆಂಡ್ ಮಹಿಳಾ ಟೆಸ್ಟ್ ಕ್ರಿಕೆಟ್ ಶುರು
ಇಂಗ್ಲೆಂಡ್ ನ ಸೌತಾಂಪ್ಟನ್ ನಲ್ಲಿ ವಿರಾಟ್ ಕೊಹ್ಲಿ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ರೆಡಿಯಾಗುತ್ತಿದೆ. ಜೂನ್ 18ರಿಂದ ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.
ಇನ್ನೊಂದೆಡೆ ಭಾರತದ ಮಹಿಳಾ ತಂಡ ಕೂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಮಿಥಾಲಿ ರಾಜ್ ನೇತ್ವತ್ವದ ಭಾರತ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಹಾಗೂ ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಆಡಲಿದೆ.
ಮೊದಲ ಟೆಸ್ಟ್ ಪಂದ್ಯ ಜೂನ್ 16ರಿಂದ ಆರಂಭವಾಗಲಿದೆ. ಅದೇ ರೀತಿ ಏಕದಿನ ಸರಣಿ ಜೂನ್ 27ರಿಂದ ಹಾಗೂ ಟಿ-ಟ್ವೆಂಟಿ ಸರಣಿ ಜುಲೈ 9ರಿಂದ ಶುರುವಾಗಲಿದೆ.
ಟೆಸ್ಟ್ ಪಂದ್ಯ ಜೂನ್ 16ರಿಂದ 19ರವರೆಗೆ, ಏಕದಿನ ಪಂದ್ಯಗಳು ಜೂನ್ 27, 30 ಮತ್ತು ಜುಲೈ 3ರಂದು ನಡೆಯಲಿದೆ. ಅದೇ ರೀತಿ ಟಿ-20 ಪಂದ್ಯ ಜುಲೈ 9, 11 ಮತ್ತು 15ರಂದು ನಡೆಯಲಿದೆ.
ಭಾರತ ಮಹಿಳಾ ತಂಡ
ಮಿಥಾಲಿ ರಾಜ್ (ನಾಯಕಿ), ಹರ್ಮನ್ ಪ್ರೀತ್ ಕೌರ್ (ಉಪನಾಯಕಿ), ಸ್ಮøತಿ ಮಂದಾನ, ಪೂನಂ ರೌತ್, ಪ್ರಿಯಾ ಪೂನಿಯಾ, ದೀಪ್ತಿ ಶರ್ಮಾ, ಜಿಮಿಮಾಹ್ ರೋಡ್ರಿಗಸ್, ಶಫಾಲಿ ವರ್ಮಾ, ಸ್ನೇಹಾ ರಾಣಾ, ತನಿಯಾ ಭಟಿಯ (ವಿಕೆಟ್ ಕೀಪರ್), ಇಂದ್ರಾಣಿ ರಾಯ್ (ವಿಕೆಟ್ ಕೀಪರ್), ಜೂಲಾನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ಟ್ರಾಕರ್, ಅರುಂಧತಿ ರೆಡ್ಡಿ, ಪೂನಮ್ ಯಾದವ್, ಏಕ್ತಾ ಬಿಸ್ಟ್, ರಾಧಾ ಯಾದವ್.








