Women T20 : ಇಂಗ್ಲೆಂಡ್ ವಿರುದ್ಧ 8 ವಿಕೆಟ್ಗಳ ಜಯ ಸಾಧಿಸಿದ ಭಾರತ – ಸ್ಮೃತಿ ಪಂದ್ಯ ಶ್ರೇಷ್ಠ…
ಸ್ಮೃತಿ ಮಂದಾನ ಗಳಿಸಿದ ಅಜೇಯ 79 ರನ್ಗಳಿಂದ ಭಾರತ ಮಹಿಳಾ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಎರಡನೇ T20I ನಲ್ಲಿ 8 ವಿಕೆಟ್ಗಳಿಂದ ಜಯ ಸಾಧಿಸಿದೆ.
ಡರ್ಬಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಭಾರತ ತಂಡಕ್ಕೆ 143 ರನ್ ಗಳ ಗುರಿ ನೀಡಿತು.
ಮಂಧಾನ ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಅದ್ಭುತ ಇನ್ನಿಂಗ್ಸ್ ನಿಂದ ಭಾರತ ತಂಡ 2 ವಿಕೆಟ್ಗಳ ನಷ್ಟಕ್ಕೆ ಗುರಿ ಮುಟ್ಟಿತು. ಹರ್ಮನ್ಪ್ರೀತ್ 22 ಎಸೆತಗಳಲ್ಲಿ ಅಜೇಯ 29 ರನ್ ಗಳಿಸಿದರು. ಮಂದಾನ 79 ರನ್ ಗಳಿಸಿ ಪಂದ್ಯ ಶೇಷ್ಠ ಪ್ರಶಸ್ತಿಗೆ ಭಾಜನರಾದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ಗೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 16 ರನ್ಗಳಿಗೆ ಪ್ರಮುಖ 3 ವಿಕೆಟ್ಗಳು ಪತನಗೊಂಡವು. ಎರಡನೇ ಓವರ್ನಲ್ಲಿ ಇಂಗ್ಲೆಂಡ್ಗೆ ಮೊದಲ ಹೊಡೆತ ನೀಡಿದ ದೀಪ್ತಿ ಶರ್ಮಾ ಇಂಗ್ಲೆಂಡ್ ಆರಂಭಿಕ ಆಟಗಾರ್ತಿ ಸೋಫಿಯಾ ಡಂಕ್ಲಿ ಅವರನ್ನ 5 ರನ್ ಗೆ ಕಟ್ಟಿ ಹಾಕಿದರು. ಇದಾದ ಬಳಿಕ ರೇಣುಕಾ ಸಿಂಗ್ ಅವರು ಮೂರನೇ ಓವರ್ನಲ್ಲಿ ಡ್ಯಾನಿ ವ್ಯಾಟ್ ಅವರನ್ನ ಔಟ್ ಮಾಡಿದರು. ಆಲಿಸ್ ಕ್ಯಾಪ್ಸಿ ರೂಪದಲ್ಲಿ ಇಂಗ್ಲೆಂಡ್ ಮೂರನೇ ವಿಕೆಟ್ ಬಿದ್ದಿತು.
#SnehRana made life difficult for the English batters with an impressive spell of 3️⃣/2️⃣4️⃣ 👏🏼
📹 | Here's a recap of her 🔝 performance from the 2nd T20I 🤩……..#Varisu #RashmikaMandanna #SmritiMandhana #JacquelineFernandez #MohsinKhan #HindiDiwas pic.twitter.com/jZwjhOspRs
— Delhi Ke Khalifa (@KhalifaDelhi) September 14, 2022
ಇಂಗ್ಲೆಂಡ್ 100 ರನ್ಗಳೊಳಗೆ ಕುಸಿಯುವ ಅಪಾಯದಲ್ಲಿದ್ದಾಗ ಫ್ರೇಯಾ ಕೆಂಪ್ ಮತ್ತು ಮಾಯಾ ಬೌಚಿಯರ್ ಅವರ 65 ರನ್ಗಳ ಜೊತೆಯಾಟದಿಂದಾಗಿ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲು ಸಾಧ್ಯವಾಯಿತು. ಬೌಚಿಯರ್ 26 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಿಂದ 34 ರನ್ ಗಳಿಸಿದರು ಮತ್ತು ಫ್ರೇಯಾ ಅಜೇಯ 51 ರನ್ ಗಳಿಸಿದರು.
ಭಾರತ ಪರ ಸ್ನೇಹ್ ರಾಣಾ 24 ರನ್ ನೀಡಿ ಮೂರು ವಿಕೆಟ್ ಪಡೆದರು. ಇದೇ ವೇಳೆ ರೇಣುಕಾ ಸಿಂಗ್ ಮತ್ತು ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ಹಿಂದಿನ ಪಂದ್ಯದಿಂದ ಪಾಠ ಕಲಿತ ಟೀಂ ಇಂಡಿಯಾ ಉತ್ತಮ ಆರಂಭ ಪಡೆದಿದೆ. ಮಂದಾನ ಮತ್ತು ಶೆಫಾಲಿ ವರ್ಮಾ ನಡುವೆ ಮೊದಲ ವಿಕೆಟ್ಗೆ 55 ರನ್ಗಳ ಜೊತೆಯಾಟ ಬಂತು. ಶೆಫಾಲಿ 17 ಎಸೆತಗಳಲ್ಲಿ 20 ರನ್ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಹೇಮಲತಾ 9 ರನ್ ಗಳಿಸಿ ಔಟಾದರು. ಇದರ ನಂತರ, ಮಂದಾನ ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ನಡುವೆ ನಾಲ್ಕನೇ ವಿಕೆಟ್ಗೆ 69 ರನ್ಗಳ ಜೊತೆಯಾಟ ಕೂಡಿ ಬಂತು..








