ಶತಕ ವಂಚಿತೆ ಶಫಾಲಿ ಶರ್ಮಾ- ಇಂಗ್ಲೆಂಡ್ ವಿರುದ್ಧ ಸಂಕಷ್ಟಕ್ಕೆ ಸಿಲುಕಿದ ಭಾರತ ಮಹಿಳಾ ತಂಡ
ಬ್ರಿಸ್ಟೋಲ್ ನಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಭಾರತ ಮಹಿಳಾ ತಂಡ ಸಂಕಷ್ಟಕ್ಕೆ ಸಿಲುಕಿದೆ.
ಎರಡನೇ ದಿನದ ಅಂತ್ಯಕ್ಕೆ ಭಾರತ ಮಹಿಳಾ ತಂಡ ಐದು ವಿಕೆಟ್ ಕಳೆದುಕೊಂಡು 187 ರನ್ ದಾಖಲಿಸಿದೆ. ಇದಕ್ಕು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 9 ವಿಕೆಟ್ ಕಳೆದುಕೊಂಡು 396 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಸದ್ಯ ಭಾರತ ಮಹಿಳಾ ತಂಡ 209 ರನ್ ಗಳ ಹಿನ್ನಡೆ ಅನುಭವಿಸಿದೆ.
ಇಂಗ್ಲೆಂಡ್ ನ ಬೃಹತ್ ಮೊತ್ತದ ಸವಾಲಿಗೆ ಭಾರತ ಮಹಿಳಾ ತಂಡದ ಆರಂಭಿಕ ಆಟಗಾರ್ತಿಯರು ದಿಟ್ಟ ಹೋರಾಟವನ್ನೇ ನೀಡಿದ್ರು.
ಆರಂಭಿಕರದ ಸ್ಮತಿ ಮಂದಾನ ಮತ್ತು± ಶಫಾಲಿ ಶರ್ಮ ಮೊದಲ ವಿಕೆಟ್ ಗೆ 167 ರನ್ ದಾಖಲಿಸಿದ್ರು. ಸ್ಮತಿ ಮಂದಾನ ಅವರು ಆಕರ್ಷಕ 78 ರನ್ ಗಳಿಸಿದ್ರು.
ಇನ್ನೊಂದು ಬಿರುಸಿನ ಬ್ಯಾಟಿಂಗ್ ನಡೆಸಿದ ಶಫಾಲಿ ಶರ್ಮ ಕೇವಲ ನಾಲ್ಕು ರನ್ ಗಳಿಂದ ಶತಕವಂಚಿತರಾದ್ರು.. 152 ಎಸೆತಗಳಲ್ಲಿ ಶಫಾಲಿ ಶರ್ಮಾ ಅವರು 13 ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಮನಮೋಹಕ 96 ರನ್ ಗಳಿಸಿ ನಿರಾಸೆಯಿಂದಲೇ ಪೆವಿಲಿಯನ್ ದಾರಿ ಹಿಡಿದ್ರು.
ನಂತರ ಪೂನಮ್ ರೌತ್ 2 ರನ್ ಗಳಿಸಿದ್ರೆ, ಶಿಖಾ ಪಾಂಡೆ ಶೂನ್ಯ ಸುತ್ತಿದ್ರು. ನಾಯಕಿ ಮಿಥಾಲಿ ರಾಜ್ ಕೇವಲ ಎರಡು ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು.
ಹರ್ಮನ್ ಪ್ರೀತ್ ಕೌರ್ ಅಜೇಯ ನಾಲ್ಕು ರನ್ ಮತ್ತು ದೀಪ್ತಿ ಶರ್ಮಾ ಖಾತೆ ತೆರೆಯದೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.








