ಜಾಗತಿಕ ಅರ್ಥಿಕ ಸಂಕಷ್ಟದ ನಡುವೆ ಭಾರತ 2019 ರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ಅನ್ನು ಹಿಂದಿಕ್ಕುವ ಮೂಲಕ ವಿಶ್ವದ ಐದನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಅಮೆರಿಕದ ಥಿಂಕ್ ಟ್ಯಾಂಕ್ ವರ್ಲ್ಡ್ ಪಾಪ್ಯುಲೇಷನ್ ರಿವ್ಯೂ ತನ್ನ ವರದಿಯಲ್ಲಿ ಭಾರತ, ಬ್ರಿಟನ್ ಮತ್ತು ಫ್ರಾನ್ಸ್ನ ಆರ್ಥಿಕತೆಗಳನ್ನು ಹಿಂದಿಕ್ಕಿ ಈ ಸಾಧನೆ ಮಾಡಿದೆ ಎಂದು ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಭಾರತದ ಅರ್ಥ ವ್ಯವಸ್ಥೆ ಐದನೇ ಸ್ಥಾನಕ್ಕೇರಿದ್ದು, ಭಾರತದ ಜಿಡಿಪಿ 2.94 ಲಕ್ಷ ಕೋಟಿ ಡಾಲರ್ ಆಗಿದೆ. ಬ್ರಿಟನ್ನ ಅರ್ಥ ವ್ಯವಸ್ಥೆ 2.83 ಲಕ್ಷ ಕೋಟಿ ಡಾಲರ್ ಮತ್ತು ಫ್ರಾನ್ಸ್ ನ ಅರ್ಥ ವ್ಯವಸ್ಥೆ 2.71 ಲಕ್ಷ ಕೋಟಿ ಡಾಲರ್ ಆಗಿದೆ. ಭಾರತವು ತನ್ನ ಹಿಂದಿನ ನೀತಿಗಳನ್ನು ತೊರೆದು ಮುಕ್ತ-ಮಾರುಕಟ್ಟೆ ಆರ್ಥ ವ್ಯವಸ್ಥೆ ಕಡೆ ಹೆಜ್ಜೆ ಹಾಕುತ್ತಿದ್ದು, ಅಭಿವೃದ್ಧಿ ಹೊಂದುತ್ತಿದೆ ಎಂದು ವರದಿ ಹೇಳಿದೆ.
ಭಾರತದ ಜಿಡಿಪಿ 10.51 ಲಕ್ಷ ಕೋಟಿ ಡಾಲರ್ ಆಗಿದ್ದು, ಖರೀದಿಸುವ ಸಾಮರ್ಥ್ಯ ಜಪಾನ್ ಮತ್ತು ಜರ್ಮನಿಯನ್ನು ಮೀರಿದೆ. ಭಾರತದ ಹೆಚ್ಚಿನ ಜನಸಂಖ್ಯೆಯ ಕಾರಣ, ಭಾರತದ ತಲಾಆದಾಯ ಪ್ರಮಾಣ 2,170 ಡಾಲರ್ (ಆಮೆರಿಕದ ತಲಾ ಆದಾಯ ಪ್ರಮಾಣ 62,794). ಆದಾಗ್ಯೂ ಭಾರತದ ನೈಜ ಜಿಡಿಪಿ ಬೆಳವಣಿಗೆ ಸತತ ಮೂರನೇ ವರ್ಷ ಶೇಕಡ 7.5ರಿಂದ ಶೇಕಡ 5ಕ್ಕೆ ಇಳಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
1990 ರ ದಶಕದ ಆರಂಭದಲ್ಲಿ ಭಾರತದ ಆರ್ಥಿಕ ಉದಾರೀಕರಣವು ಪ್ರಾರಂಭವಾಗಿದ್ದು, ಸದ್ಯ ತೆಗೆದುಕೊಂಡಿರುವ ನಿರ್ಧಾರಗಳೆಲ್ಲವೂ ಭಾರತದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿವೆ ಎಂದು ವರದಿ ಹೇಳಿದೆ.
ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ
ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಪವಿತ್ರ ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ನಡೆಸಿದ ಆರೋಪದ ಮೇಲೆ 14 ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಈಗ ಭಾರಿ...








