Kamal Haasan : ಇಂಡಿಯನ್ 2 ಚಿತ್ರದ ಹೊಸ ಪೋಸ್ಟರ್ ಬಿಡುಗಡೆ…
ತಮಿಳಿನ ಸೂಪರ್ ಸ್ಟಾರ್ ನಟ ಕಮಲ್ ಹಾಸನ್ ಅವರ 68 ನೇ ಹುಟ್ಟುಹಬ್ಬದ ಪ್ರಯುಕ್ತ ಇಂಡಿಯನ್ 2 ಚಿತ್ರದ ಹೊಸ ಪೋಸ್ಟರ್ ಗಳನ್ನ ನಿರ್ದೇಶಕ ಶಂಕರ್ ಬಿಡುಗಡೆ ಮಾಡಿದ್ದಾರೆ.
“ನಮ್ಮ ನಿಧಿ, ಬಹುಮುಖ ಪ್ರತಿಭೆ ಕಮಲ್ ಹಾಸನ್ ಸರ್ ಅವರಿಗೆ ಜನ್ಮದಿನದ ಶುಭಾಶಯಗಳು!” ಎಂದು ಹೊಸ ಪೋಸ್ಟರ್ ಹಂಚಿಕೊಳ್ಳುವಾಗ ನಿರ್ದೇಶಕ ಶಂಕರ್ ಟ್ವೀಟ್ ಮಾಡಿದ್ದಾರೆ. ಪೋಸ್ಟರ್ ನಲ್ಲಿ ಕಮಲ್ ಹಾಸನ್ ತಾತಾ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.
https://twitter.com/rameshlaus/status/1589454648402145280?ref_src=twsrc%5Etfw%7Ctwcamp%5Etweetembed%7Ctwterm%5E1589454648402145280%7Ctwgr%5Eb1016ecc5b66d790439ed759ce0d896a360da6b8%7Ctwcon%5Es1_&ref_url=https%3A%2F%2Findianexpress.com%2Farticle%2Fentertainment%2Ftamil%2Findian-2-new-posters-kamal-haasan-is-triumphant-as-indian-thatha-8254211%2F
ಎರಡು ವರ್ಷಗಳ ಸಂಕಷ್ಟದ ನಂತರ ಇಂಡಿಯನ್ 2 ಚಿತ್ರದ ಚಿತ್ರೀಕರಣವನ್ನ ಸೆಪ್ಟಂಬರ್ ನಲ್ಲಿ ಶುರು ಮಾಡಲಾಗಿದೆ. ಫೆಬ್ರವರಿ 2020 ರಲ್ಲಿ ಇಂಡಿಯನ್ 2 ಸೆಟ್ ನಲ್ಲಿ ಸಂಭವಿಸಿದ ಅಫಘಾತದಿಂದ 3 ಸಿನಿಮಾ ಕೆಲಸಗಾರರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಆನಂತರ ಚಿತ್ರೀಕರಣವನ್ನ ಸ್ಥಗತಗೊಳಿಸಲಾಗಿತ್ತು. ಕೋವಿಡ್ ಮತ್ತು ಲಾಕ್ ಡೌನ್ ನಿಂದಾಗಿ ಚಿತ್ರೀಕರಣ ತಡವಾಯಿತು.
ಈ ನಡುವೆ ನಿರ್ದೇಶಕ ಶಂಕರ್, ರಾಮ್ ಚರಣ್ ಜೊತೆ ಮತ್ತೊಂದು ಪ್ರಾಜೆಕ್ಟ್ ಗೆ ಕೈ ಹಾಕಿದ್ದರು. ಹೊಸ ಚಿತ್ರಕ್ಕೆ ಕೈ ಹಾಕಿದ್ದಕ್ಕಾಗಿ ಇಂಡಿಯನ್ 2 ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಶಂಕರ್ ವಿರುದ್ಧ ತಡೆಯಾಜ್ಞೆ ಪಡೆಯಲು ನಿರ್ಮಾಪಕರು ನ್ಯಾಯಾಲಯದ ಮೊರೆ ಹೋಗಿದ್ದರು.
ನಂತರ ನಟ ಮತ್ತು ನಿರ್ಮಾಪಕ ಉದಯನಿಧಿ ಸ್ಟಾಲಿನ್ ಹೆಚ್ಚುವರಿ ನಿರ್ಮಾಪಕರಾಗಿ ಇಂಡಿಯನ್ 2 ಕಾಲಿಟ್ಟು ಪ್ರಾಜೆಕ್ಟ್ ಮತ್ತೆ ಶುರುವಾಗುವಂತೆ ಮಾಡಿದ್ದಾರೆ. ಶಂಕರ್ ರಾಮ್ ಚರಣ್ ಅಭಿನಯದ ಇಂಡಿಯನ್ 2 ಮತ್ತು ಆರ್ಸಿ 15 ಚಿತ್ರಗಳನ್ನ ಏಕಕಾಲದಲ್ಲಿ ಚಿತ್ರೀಕರಿಸುತ್ತಿದ್ದಾರೆ.
ಇಂಡಿಯನ್ 2 1996 ಬಿಡುಗಡೆಯಾದ ಬ್ಲಾಕ್ಬಸ್ಟರ್ ಚಿತ್ರ ಇಂಡಿಯನ್ ನ ಉತ್ತರಭಾಗವಾಗಿದೆ. ಭ್ರಷ್ಟಾಚಾರ ಪಿಡುಗನ್ನ ಕೊನೆಗಾಣಿಸಲು ನಾಯಕ ಹೋರಾಡುವ ಕಥೆಯನ್ನ ಚಿತ್ರ ಹೊಂದಿದೆ.
Indian 2 new posters: Kamal Haasan is triumphant as ‘Indian thatha’







