Pitch Black 2022- ಸುಖೋಯ್ – 30 ಪೈಟರ್ ಜೆಟ್ ಗೆ ಗಾಳಿಯಲ್ಲಿ ಇಂಧನ ತುಂಬಿಸಿ ಪ್ರಾಕ್ಟೀಸ್
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ವಾಯುಪಡೆಯ ಯುದ್ಧ ತರಬೇತಿ ಪಿಚ್ ಬ್ಲ್ಯಾಕ್ 2022 ರ ಸಮಯದಲ್ಲಿ ಭಾರತದ ಯುದ್ಧ ವಿಮಾನ ಸುಖೋಯ್ -30ಗೆ ಗಾಳಿಯಲ್ಲಿ ಇಂಧನ ತುಂಬಿಸಲಾಯಿತು. ಫ್ರೆಂಚ್ ವಿಮಾನ ಮತ್ತು ಬಾಹ್ಯಾಕಾಶ ಪಡೆ ಘಟಕಗಳ ಬೆಂಬಲದೊಂದಿಗೆ ಇಂಧನ ತುಂಬಿಸುವ ಕಸರತ್ತು ನಡೆಸಲಾಯಿತು. ಇದಕ್ಕಾಗಿ ಭಾರತೀಯ ವಾಯುಸೇನೆ ಇಬ್ಬರಿಗೂ ಧನ್ಯವಾದ ಅರ್ಪಿಸಿದೆ.
ನೀಲಾಕಾಶದಲ್ಲಿ ಎರಡು ಸುಖೋಯ್ ಫೈಟರ್ ಜೆಟ್ ಗಳಿಗೆ ಇಂಧನ ಹೊತ್ತ ವಿಮಾನದ ರೆಕ್ಕೆಗಳಿಗೆ ಜೋಡಿಸಲಾಗಿರುವ ಇಂಧನ ಪೈಪ್ ನಿಂದ ಸಂಪರ್ಕ ಸಾಧಿಸುವುದನ್ನ ನೋಡಬಹುದು. ಮೂರು ಯುದ್ಧವಿಮಾನಗಳು ಒಂದೇ ಚೌಕಟ್ಟಿನಲ್ಲಿ ಕಾಣಿಸುವ ದೃಶ್ಯವೂ ವಿಡಿಯೋದಲ್ಲಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಶೇರ್ ಆಗುತ್ತಿದೆ.
https://twitter.com/i/status/1560313174129545218
ಪಿಚ್ ಬ್ಲಾಕ್ ಎಂದರೇನು?
ಆಸ್ಟ್ರೇಲಿಯಾದಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ, ಪಿಚ್ ಬ್ಲ್ಯಾಕ್ ಎಂಬ ಅಭ್ಯಾಸವಿದೆ. ಈ ಸಮಯದಲ್ಲಿ ನಕಲಿ ವಾಯುಯುದ್ಧ ನಡೆಯುತ್ತದೆ. ಈ ಬಾರಿ ಪಿಚ್ ಬ್ಲಾಕ್ ಆಗಸ್ಟ್ 19 ರಿಂದ ಪ್ರಾರಂಭವಾಗಿದ್ದು, ಸೆಪ್ಟೆಂಬರ್ 6 ರವರೆಗೆ ಮುಂದುವರೆಯಲಿದೆ. ಸುಮಾರು 100 ಯುದ್ಧ ವಿಮಾನಗಳು ಮತ್ತು 2,500 ಸೇನಾ ಸಿಬ್ಬಂದಿ ಇದರಲ್ಲಿ ಭಾಗವಹಿಸಲಿದ್ದಾರೆ.
ಭಾರತ, ಕೆನಡಾ, ಫ್ರಾನ್ಸ್, ದಕ್ಷಿಣ ಕೊರಿಯಾ, ಸಿಂಗಾಪುರ, ಥೈಲ್ಯಾಂಡ್, ಜರ್ಮನಿ, ಇಂಡೋನೇಷ್ಯಾ, ಜಪಾನ್, ಮಲೇಷ್ಯಾ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಫಿಲಿಪೈನ್ಸ್, ಯುಎಇ, ಯುಕೆ ಮತ್ತು ಯುಎಸ್ ಸೇರಿದಂತೆ 17-ದೇಶಗಳು ‘ಪಿಚ್ ಬ್ಲ್ಯಾಕ್ 2022’ ನಲ್ಲಿ ಭಾಗವಹಿಸುತ್ತಿವೆ ಎಂದು ಆಸ್ಟ್ರೇಲಿಯಾ ಸರ್ಕಾರ ಹೇಳಿದೆ.








