ಕಣಿವೆ ನಾಡಿನಲ್ಲಿ ಮತ್ತೆ ಉಗ್ರರು ದಾಳಿಗೆ ತಂತ್ರ ಹೆಣೆದಿರುವ ಮಾಹಿತಿ ಲಭ್ಯವಾದ ಬೆನ್ನಲ್ಲೇ ಇದೀಗ ಉಗ್ರರ ಬೇಟೆಗೆಗಾಗಿ ಬಣ ತೊಟ್ಟಿರುವ ಭದ್ರತಾ ಪಡೆ ದಕ್ಷಿಣ ಕಾಶ್ಮೀರದ ಭಾಗದಲ್ಲಿ ಶೋಧ ಕಾರ್ಯ ಆರಂಭಿಸಿದೆ. ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದ ದೇವಾರ್ ಗ್ರಾಮದಲ್ಲಿ ಭದ್ರತಾ ಪಡೆ ಉಗ್ರರಿಗಾಗಿ ಹುಡುಕಾಟ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಭದ್ರತಾ ಪಡೆಯ ಯೋಧರ ಜೊತೆಗೆ ಜಮ್ಮು – ಕಾಶ್ಮೀರ ಪೊಲೀಸ್, ಸಿಆರ್ಪಿಎಫ್ ಸಹ ಕೈಜೋಡಿಸಿದ್ದು, ಉಗ್ರರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೂ ಕಾರ್ಯಾಚರಣೆ ಹಿನ್ನೆಲೆ ಟ್ರಾಲ್ ಪ್ರದೇಶದ ಪ್ರವೇಶ ಹಾಗೂ ನಿರ್ಮನ ಸ್ಥಳಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.








