ಹಿಮಪಾತದಲ್ಲಿ ಸಿಲುಕಿದ್ದ 30 ನಾಗರೀಕರನ್ನ ರಕ್ಷಿಸಿದ ಭಾರತೀಯ ಸೇನೆ..
ಹಿಮಪಾತಕ್ಕೆ ಸಿಲುಕಿದ್ದ 30 ಕ್ಕೂ ಹೆಚ್ಚು ನಾಗರಿಕರನ್ನ ಭಾರತೀಯ ಸೈನಿಕರು ರಕ್ಷಣಾ ಕಾರ್ಯಾಚರಣೆ ನಡೆಸಿ ಕಾಪಾಡಿದ್ದಾರೆ. ಜಮ್ಮು ಕಾಶ್ಮೀರದ ಚೌಕಿಬಾಲ್ – ತಂಗಧರ್ ರಸ್ತೆಯಲ್ಲಿ ಹಿಮಪಾತ ಮತ್ತು ಹಿಮಕುಸಿತದಿಂದಾಗಿ ಹೆದ್ದಾರಿಯಲ್ಲಿ ಸಿಲುಕಿಕೊಂಡಿದ್ದರು.
ನಾಗರಿಕರು ತಮ್ಮ ವಾಹನಗಳಲ್ಲಿ ಸಿಲುಕಿರುವ ಮಾಹಿತಿಯು ಎನ್‌ಸಿ ಪಾಸ್‌ನಲ್ಲಿ ಸೈನಿಕರಿಗೆ ತಲುಪಿದ ತಕ್ಷಣ, ಭಾರತೀಯ ಸೇನೆಯ ಎರಡು ಹಿಮಪಾತ ರಕ್ಷಣಾ ತಂಡಗಳು ಮತ್ತು ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (ಜಿಆರ್‌ಇಎಫ್) ತಂಡವನ್ನು ಸಜ್ಜುಗೊಳಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
14 ನಾಗರಿಕರನ್ನು ರಕ್ಷಿಸಿ ನೀಲಂ ಮತ್ತು 16 ನಾಗರಿಕರನ್ನು NC ಪಾಸ್‌ಗೆ ಕರೆತರಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ರಕ್ಷಿಸಲ್ಪಟ್ಟ ಎಲ್ಲಾ ನಾಗರಿಕರಿಗೆ ರಾತ್ರಿ ಆಹಾರ, ವೈದ್ಯಕೀಯ ಆರೈಕೆ ಮತ್ತು ಆಶ್ರಯವನ್ನು ಒದಗಿಸಲಾಗಿದೆ. ಸಂಪೂರ್ಣ ರಕ್ಷಣಾ ಕಾರ್ಯಾಚರಣೆ ಸುಮಾರು ಐದರಿಂದ ಆರು ಗಂಟೆಗಳ ಕಾಲ ನಡೆದಿದೆ.








