ಭಾರತದ ಕೊವಾಕ್ಸಿನ್ ತುರ್ತು ಬಳಕೆಗೆ ಅನುಮೋದನೆ ನೀಡಿದ ಫಿಲಿಪೈನ್ಸ್
ಫಿಲಿಫೈನ್ಸ್ : ಫಿಲಿಫೈನ್ಸ್ ನಲ್ಲಿ ಸದ್ಯ ಕೋವಿಡ್ ಹಾವಳಿ ಹೆಚ್ಚಾಗಿದ್ದು, ಲಸಿಕೆಯ ಅಗತ್ಯವೂ ಹೆಚ್ಚಾಗಿದೆ.. ಈ ನಡುವೆ ಭಾರತದ ಕೊವಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಫಿಲಿಪೈನ್ಸ್ ದೇಶದ ಆಹಾರ ಮತ್ತು ಔಷಧ ಸಂಸ್ಥೆ ಅನುಮೋದನೆ ನೀಡಿದೆ.
ತಾನು ಅಭಿವೃದ್ಧಿ ಪಡಿಸಿದ ಕೊವಾಕ್ಸಿನ್ ಕೊರೊನಾ ಲಸಿಕೆ ಶೇ.77.8 ರಷ್ಟು ಪರಿಣಾಮಕಾರಿ ಎಂದು ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ಭಾರತ ಸರ್ಕಾರಕ್ಕೆ ವರದಿ ನೀಡಿದ ಬೆನ್ನಲ್ಲೇ ಫಿಲಿಪೈನ್ಸ್ ಸರ್ಕಾರ ತುರ್ತು ಬಳಕೆಗೆ ಅನುಮೋದನೆ ನೀಡಿದೆ.
ಭಾರತ್ ಬಯೋಟೆಕ್ ಕಂಪನಿ ನೀಡಿದ ದಾಖಲೆಗಳನ್ನು ಪೂರ್ಣವಾಗಿ ಪರಿಶೀಲಿಸಿದ ಬಳಿಕ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ ಎಂದು ಎಫ್‍ಡಿಎ ಮುಖ್ಯಸ್ಥ ಎನ್ರಿಕ್ ಡೊಮಿಂಗೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾರತ್ ಬಯೋಟೆಕ್ ತನ್ನ ಮೂರನೇ ಕ್ಲಿನಿಕಲ್ ಪ್ರಯೋಗದ ವರದಿಯನ್ನು ಡಿಸಿಜಿಐ ಎಸ್‍ಇಸಿಗೆ ಸಲ್ಲಿಸಿತ್ತು. ಭಾರತದಾದ್ಯಂತ ನಡೆಸಿದ 3ನೇ ಹಂತದ ಪ್ರಯೋಗಗಳಲ್ಲಿ ಕೋವಾಕ್ಸಿನ್ ಶೇ. 77.8 ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ವರದಿಯಾಗಿದೆ.
ಲಸಿಕೆ ಪಡೆಯದವರನ್ನು ಜೈಲಿಗೆ ಹಾಕಲಾಗುತ್ತದೆ. ಇಲ್ಲವೇ ನೀವೇ ದೇಶಬಿಟ್ಟು ಭಾರತ ಅಥವಾ ಅಮೆರಿಕಕ್ಕೆ ತೊಲಗಿ ಎಂದು ಕೋವಿಡ್ ಲಸಿಕೆ ವಿರೋಧಿಗಳಿಗೆ ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.
ಕೊರೊನಾ ಭಯ : ತನ್ನ 5 ವರ್ಷದ ಮಗುವಿಗೆ 15 ಬಾರಿ ಚಾಕು ಇರಿದ ತಾಯಿ
ರಸ್ತೆ ಬದಿಯಲ್ಲಿ ಬ್ರೆಡ್ ಮಾರಿದ ಸೋನು ಸೂದ್ – ವಿಡಿಯೋ ವೈರಲ್
ಸಂಬರಗಿಯವರು ನನ್ನಿಂದ ಏನು ಕಿತ್ಕೊಳ್ಳೊಕೆ ಆಗಲ್ಲ – ಶಮಂತ್
ಕೊರೊನಾ ರಿಪೋರ್ಟ್ : ನಿನ್ನೆ 51,667 ಕೇಸ್ ಪತ್ತೆ, 64,527 ಮಂದಿ ಡಿಸ್ಚಾರ್ಜ್
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








