ಉಕ್ರೇನ್ ಬಿಡುವಂತೆ ತನ್ನ ನಾಗರಿಕರಿಗೆ ಸಲಹೆ ನಿಡಿದ ಭಾರತೀಯ ರಾಯಭಾರಿ ಕಛೇರಿ…
ರಷ್ಯಾ ಮತ್ತು ಉಕ್ರೇನ್ ಯುದ್ಧದ ನಡುವೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ನ ನಾಲ್ಕು ಪ್ರದೇಶಗಳಲ್ಲಿ ಮಿಲಿಟರಿ ಆಡಳಿತವನ್ನ ಘೋಷಿಸಿದ್ದಾರೆ. ಪುಟಿನ್ ಈಗಾಗಲೇ ಈ ನಾಲ್ಕು ಪ್ರಾಂತ್ಯಗಳನ್ನು ರಷ್ಯಾದೊಂದಿಗೆ ವಿಲೀನಗೊಳಿಸುವುದಾಗಿ ಈ ಹಿಂದೆ ಘೋಷಿಸಿದ್ದರು.
ಉಕ್ರೇನ್ನಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸದ ಕಾರಣ ಪರಿಸ್ಥಿತಿ ಗಂಬೀರತೆಯನ್ನ ಅರಿತ ಭಾರತೀಯ ರಾಯಭಾರಿ ಕಚೇರಿಯೂ ಉಕ್ರೇನ್ ನಲ್ಲಿರುವ ಭಾರತೀಯರು ಆದಷ್ಟು ಬೇಗ ಉಕ್ರೇನ್ ಬಿಡುವಂತೆ ಸಲಹೆ ನೀಡಿದೆ.
ಉಕ್ರೇನ್ನಲ್ಲಿ ಇತ್ತೀಚಿನ ದಾಳಿಗಳ ದೃಷ್ಟಿಯಿಂದ, ನಾಗರಿಕರು ಉಕ್ರೇನ್ ಗೆ ಪ್ರಯಾಣಿಸದಂತೆ ಸಲಹೆ ನೀಡಲಾಗಿದೆ. ಇದಲ್ಲದೆ, ಉಕ್ರೇನ್ನಲ್ಲಿ ವಾಸಿಸುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯರು ಆದಷ್ಟು ಬೇಗ ಇಲ್ಲಿಂದ ಹೊರಡಬೇಕು ಎಂದು ಹೇಳಿದೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದಾಗ, ಭಾರತವು ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರಿಸುವ ಕಾರ್ಯಾಚರಣೆಯನ್ನು ನಡೆಸಿತು ಮತ್ತು ಅನೇಕ ಭಾರತೀಯರನ್ನು ಮನೆಗೆ ಕರೆತಂದಿತ್ತು. ಆದರೆ, ಈಗ ಸರ್ಕಾರ ಅಂತಹ ಯಾವುದೇ ಸೌಲಭ್ಯ ನೀಡಲು ಮುಂದಾಗುತ್ತಿಲ್ಲ. ಜನರು ಅಲ್ಲಿಂದ ಹೊರಬರಲು ತಮ್ಮದೇ ಆದ ಮಾರ್ಗವನ್ನು ಕಂಡುಕೊಳ್ಳಬೇಕು.
ರಷ್ಯಾ ಉಕ್ರೇನ್ ನಗರಗಳ ಮೇಲೆ ಕ್ಷಿಪಣಿ ಮತ್ತು ಆತ್ಮಹತ್ಯಾ ಡ್ರೋನ್ ದಾಳಿಯನ್ನು ತೀವ್ರಗೊಳಿಸಿದೆ. ಈ ಮೂಲಕ ಹಲವಾರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ದಿನದಿಂದ ದಿನಕ್ಕೆ ರಷ್ಯಾ ಆಕ್ರಮಣಕಾರಿ ಧೋರಣೆ ಅನುಸರಿಸುತ್ತಿದೆ.
Indian embassy in Kyiv advises nationals to leave Ukraine