80 ಕ್ಕೂ ಹೆಚ್ಚು ಪಾಕಿಸ್ತಾನಿ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿ ಪಾಕಿಸ್ತಾನಕ್ಕೆ ಸೂಕ್ತ ಉತ್ತರ ನೀಡಿದ ಭಾರತೀಯ ಹ್ಯಾಕರ್ಗಳು
ಹೊಸದಿಲ್ಲಿ, ಅಗಸ್ಟ್ 19: ಆಗಸ್ಟ್ 15 ರಂದು, ದೇಶವು 74 ನೇ ವರ್ಷದ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದಾಗ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಮತ್ತು ಚೀನಾಗಳಿಗೆ ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ಕೊಡುತ್ತಿದ್ದರೆ, ಇತ್ತ ಭಾರತೀಯ ಹ್ಯಾಕರ್ಗಳ ಒಂದು ಗುಂಪು ಪಾಕಿಸ್ತಾನದ ವೆಬ್ಸೈಟ್ ಗಳನ್ನು ಹ್ಯಾಕ್ ಮಾಡಿತ್ತು.
ಭಾರತದ ಸ್ವಾತಂತ್ರ್ಯ ದಿನದ ಸಂಭ್ರಮದಂದು, ಪಾಕಿಸ್ತಾನದ 80 ಕ್ಕೂ ಹೆಚ್ಚು ವೆಬ್ಸೈಟ್ಗಳನ್ನು ಹ್ಯಾಕಿಂಗ್ ಮಾಡುವಲ್ಲಿ ಯಶಸ್ವಿಯಾದ ಭಾರತೀಯ ಹ್ಯಾಕರ್ಗಳ ಗುಂಪು, ಆ ವೆಬ್ಸೈಟ್ಗಳಲ್ಲಿ ಭಾರತೀಯ ತ್ರಿವರ್ಣವನ್ನು ಹಾರಿಸಿತ್ತು.
ಅಷ್ಟೇ ಅಲ್ಲ, ‘ಇಂಡಿಯನ್ ಸೈಬರ್ ?? ಟ್ರೂಪ್ಸ್’ ಎಂದು ಕರೆದುಕೊಳ್ಳುವ ಹ್ಯಾಕರ್ಸ್ ಗುಂಪು ಪಾಕಿಸ್ತಾನದ ವೆಬ್ಸೈಟ್ ಅನ್ನು ಹ್ಯಾಕ್ ಮಾಡಿ ಭಗವಾನ್ ರಾಮನ ಚಿತ್ರವನ್ನು ಪೋಸ್ಟ್ ಮಾಡಿ, ಪಾಕಿಸ್ತಾನ ಮತ್ತು ಕರಾಚಿಯಲ್ಲೂ ಮಂದಿರವನ್ನು ನಿರ್ಮಿಸುತ್ತೇವೆ ಎಂದು ಬರೆದಿದ್ದರು. ಒಂದೇ ದಿನದಲ್ಲಿ ಹಲವು ವೆಬ್ಸೈಟ್ಗಳ ಹ್ಯಾಕಿಂಗ್ ಪಾಕಿಸ್ತಾನಿಗಳನ್ನು ಅಸಮಾಧಾನಗೊಳಿಸಿತ್ತು ಮತ್ತು ಅವರು ತಮ್ಮ ಕೋಪವನ್ನು ಟ್ವಿಟರ್ ನಲ್ಲಿ ಹೊರಹಾಕಿದ್ದರು.
ಈ ಬಗ್ಗೆ ಮಾತನಾಡಿದ ಭಾರತೀಯ ಹ್ಯಾಕರ್ಗಳು ಇದು ಭಾರತೀಯ ಸಶಸ್ತ್ರ ಪಡೆಗಳಿಗೆ ಸಲ್ಲಿಸಿದ ಗೌರವ ಮತ್ತು ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ನಾವು ಭಾರತಕ್ಕೆ ವಿರುದ್ಧವಾಗಿರುವವರಿಗೆ ಪಾಠ ಕಲಿಸಲು ಮಾತ್ರ ಆಸಕ್ತಿ ಹೊಂದಿದ್ದೇವೆ ಎಂದು ಹ್ಯಾಕರ್ಗಳು ಸ್ಪಷ್ಟಪಡಿಸಿದ್ದಾರೆ.
ಈ ಮೊದಲು ಕಠ್ಮಂಡುವಿನ ವೆಬ್ಸೈಟ್ಗಳನ್ನು ಹ್ಯಾಕ್ ಮಾಡುವ ಮೂಲಕ ಈ ಹ್ಯಾಕರ್ಗಳು ನೇಪಾಳಕ್ಕೆ ಸೂಕ್ತ ಉತ್ತರ ನೀಡಿದ್ದರು. ಇದೀಗ ಭಾರತದ ಸ್ವಾತಂತ್ರ್ಯ ದಿನದಂದು, ಪಾಕಿಸ್ತಾನದ ಹಲವಾರು ವೆಬ್ಸೈಟ್ಗಳನ್ನು ಹ್ಯಾಕ್ ಮಾಡುವ ಮೂಲಕ ಮತ್ತು ಈ ವೆಬ್ಸೈಟ್ಗಳಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಹಾರಿಸುವ ಮೂಲಕ ಪಾಕಿಸ್ತಾನಕ್ಕೆ ತಮ್ಮ ನೈಜ ಸಾಮರ್ಥ್ಯವನ್ನು ತೋರಿಸಿದ್ದಾರೆ
ವಿಶೇಷವೆಂದರೆ, ಹಲವಾರು ಪಾಕಿಸ್ತಾನಿ ವೆಬ್ಸೈಟ್ಗಳು ಹ್ಯಾಕ್ ಆಗಿದ್ದು, ಈ ಹಲವು ವೆಬ್ಸೈಟ್ಗಳಲ್ಲಿ ಭಾರತೀಯ ತ್ರಿವರ್ಣ ಧ್ವಜ ಇನ್ನೂ ಹಾರಾಡುತ್ತಿದೆ ಮತ್ತು ಪಾಕಿಸ್ತಾನದ ಐಟಿ ತಜ್ಞರಿಗೆ ಭಾರತೀಯ ಧ್ವಜವನ್ನು ತೆಗೆದುಹಾಕಲು ಇನ್ನೂ ಸಾಧ್ಯವಾಗಿಲ್ಲ.