ಪಾಕಿಸ್ತಾನದ ಗಡಿಯೊಳಗೆ ಭಾರತದ ಕ್ಷಿಪಣಿ ಬಿದ್ದಿರುವುದು ಆಕಸ್ಮಿಕ : ರಾಜನಾಥ್ ಸಿಂಗ್ – Saaksha Tv
ನವದೆಹಲಿ: ಪಾಕಿಸ್ತಾನದ ಗಡಿಯೊಳಗೆ ಭಾರತದ ಕ್ಷಿಪಣಿ ಬಿದ್ದಿರುವುದು ಆಕಸ್ಮಿಕವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಮಾರ್ಚ್ 9ರಂದು ರಾತ್ರಿ 7 ಗಂಟೆ ಸುಮಾರಿಗೆ ಭಾರತದ ಕ್ಷಿಪಣಿ ನಿರ್ವಹಣೆ ಮತ್ತು ತಪಾಸಣೆ ವೇಳೆ ಆಕಸ್ಮಿಕವಾಗಿ ಕ್ಷಿಪಣಿ ಹಾರಿ ಪಾಕಿಸ್ತಾನಕ್ಕೆ ಬಂದಿದೆ. ಭಾರತ ಕ್ಷಿಪಣಿಯು ಪಾಕಿಸ್ತಾನದಲ್ಲಿ ಬಂದಿರುವ ಕುರಿತು ಈಗಾಗಲೇ ತನಿಖೆ ಪ್ರಾರಂಭಿಸಲಾಗಿದೆ. ಈ ತನಿಖೆ ಪೂರ್ಣಗೊಂಡ ನಂತರವಷ್ಟೇ ಕ್ಷಿಪಣಿ ಆಕಸ್ಮಿಕವಾಗಿ ಹಾರಿರುವುದರ ಹಿಂದಿನ ನಿಖರ ಕಾರಣವೂ ತಿಳಿಯಲಿದೆ ಎಂದು ಹೇಳಿದರು
ದೇಶದ ಕ್ಷಿಪಣಿ ವ್ಯವಸ್ಥೆಯು ಭದ್ರತೆ ಮತ್ತು ಸುರಕ್ಷಿತವಾಗಿದೆ ಎಂದು ಭರವಸೆ ನೀಡಿದ ರಾಜನಾಥ್ ಸಿಂಗ್, ದೇಶದ ಶಸ್ತ್ರಾಸ್ತ್ರ ವ್ಯವಸ್ಥೆಗಳ ಸುರಕ್ಷತೆ ಮತ್ತು ಭದ್ರತೆಗೆ ಸರ್ಕಾರವು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಾಕಿಸ್ತಾನಕ್ಕೆ ಕ್ಷಿಪಣಿ ಹಾರಿರುವ ಘಟನೆಯಲ್ಲಿ ಯಾರಿಗೂ ಗಾಯಗಳಾಗದಿರುವುದು ಸಮಾಧಾನದ ಸಂಗತಿ ಎಂದಿದ್ದಾರೆ.








