Indian Navy: ನೌಕಾಪಡೆಯ ನೂತನ ಧ್ವಜಕ್ಕೆ ಛತ್ರಪತಿ ಶಿವಾಜಿ ಸ್ಫೂರ್ತಿ…
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಭಾರತೀಯ ನೌಕಾಪಡೆಯ ಹೊಸ ಧ್ವಜವನ್ನ ಅನಾವರಣಗೊಳಿಸಿದರು. ವಸಾಹತುಶಾಹಿ ಗುಲಾಮಗಿರಿಯ ಸಂಕೇತವಾದ ಸೇಂಟ್ ಜಾರ್ಜ್ ಕ್ರಾಸ್ ಅನ್ನು ತೆಗೆದುಹಾಕಿ, ಛತ್ರಪತಿ ಶಿವಾಜಿ ಮಹಾರಾಜರಿಂದ ಪ್ರೇರಿತವಾದ ಹೊಸ ಧ್ವಜ ಅನಾವರಣಗೊಂಡಿದೆ.
ಹೊಸ ಧ್ವಜವು ಮೇಲಿನ ಎಡ ಮೂಲೆಯಲ್ಲಿ ರಾಷ್ಟ್ರಧ್ವಜವನ್ನು ಹೊಂದಿದೆ. ಬಲಭಾಗದಲ್ಲಿ ಎರಡು ಅಷ್ಟಭುಜಾಕೃತಿಯ ತೋಳುಗಳಿವೆ. ಅವುಗಳ ಮಧ್ಯದಲ್ಲಿ ಲಾಂಗರ್ ಮೇಲೆ ಭಾರತದ ರಾಷ್ಟ್ರೀಯ ಚಿಹ್ನೆ ಇದೆ. ಈ ಲಂಗರದ ಕೆಳಗೆ ‘ಸಂ ನೋ ವರುಣಃ’ ಎಂಬ ಧ್ಯೇಯವಾಕ್ಯವಿದೆ. ಇದನ್ನುವೇದಗಳಿಂದ ಅಳವಡಿಸಿಕೊಳ್ಳಲಾಗಿದೆ. ಇದು ವರುಣ ದೇವರನ್ನು ಮೆಚ್ಚಿಸುವ ಮಾತು. ವರುಣ ದೇವರೇ! ‘ನಮಗೆ ದಯೆ ತೋರಿ ಮತ್ತು ನಮಗೆ ಯಶಸ್ಸನ್ನು ನೀಡಿ’ ಎಂಬುದು ಭಾವಾರ್ಥ..
ರಾಷ್ಟ್ರ ಲಾಂಛನದ ಸುತ್ತಲಿನ ಚಿನ್ನದ ಅಂಚು ಛತ್ರಪತಿ ಶಿವಾಜಿ ಮಹಾರಾಜರ ರಾಜಮುದ್ರೆಯಿಂದ ಪ್ರೇರಿತವಾಗಿದೆ. ಇದು ಸ್ಥಿರತೆಯನ್ನ ತೋರಿಸುತ್ತದೆ. ಎಂಟು ದಿಕ್ಕುಗಳನ್ನ ಪ್ರತಿನಿಧಿಸಲು ಅಷ್ಟಭುಜಾಕೃತಿಯನ್ನು ಜೋಡಿಸಲಾಗಿದೆ. ಭಾರತೀಯ ನೌಕಾಪಡೆಯು ಬಹು-ದಿಕ್ಕಿನಲ್ಲೂ ವ್ಯಾಪಕ ಕಾರ್ಯಾಚರಣೆಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನ ಇದು ತೋರಿಸುತ್ತದೆ.
ಮೊದಲಿನ ನೌಕಾ ಧ್ವಜದಲ್ಲಿ ಸೇಂಟ್ ಜಾರ್ಜ್ ಕ್ರಾಸ್ ನ ಚಿಹ್ನೆ ಇತ್ತು. ಅದಕ್ಕೂ ಮೊದಲು, ಬಿಳಿಯ ಮೇಲೆ ಕೆಂಪು ಶಿಲುಬೆ ಮತ್ತು ಯುನೈಟೆಡ್ ಕಿಂಗ್‌ಡಮ್ ಯೂನಿಯನ್ ಜ್ಯಾಕ್ ಇತ್ತು.
ಛತ್ರಪತಿ ಶಿವಾಜಿ ಮಹಾರಾಜರ ಬಳಿ 60 ಯುದ್ಧನೌಕೆಗಳು ಮತ್ತು ಸುಮಾರು 5,000 ಸೈನಿಕರಿದ್ದರು. ವಿದೇಶಿ ಆಕ್ರಮಣಗಳಿಂದ ಕರಾವಳಿಯನ್ನು ರಕ್ಷಿಸಿದ ಮೊದಲ ನೌಕಾಪಡೆ ಇದು.
ಇಂದಿನವರೆಗೂ ಭಾರತೀಯ ನೌಕಾಪಡೆಯ ಧ್ವಜವು ಗುಲಾಮಗಿರಿಯ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅದರ ಜಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರೇರಣೆಯಲ್ಲಿ ಹೊಸದನ್ನು ತರಲಾಗಿದೆ ಎಂದು ಇಂದು ತಿಳಿಸಿದರು.
ಮೋದಿ ಅವರು ಶುಕ್ರವಾರ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ನ್ನ ನೌಕಾಪಡೆಗೆ ಹಸ್ತಾಂತರಿಸಿದರು. ಇದು ನಮ್ಮ ದೇಶದಲ್ಲಿ ವಿನ್ಯಾಸಗೊಳಿಸಲಾದ ಮತ್ತು ನಿರ್ಮಿಸಲಾದ ಮೊದಲ ವಿಮಾನವಾಹಕ ನೌಕೆಯಾಗಿದೆ.








