ಭಾರತೀಯ ನೌಕಾಪಡೆಯಲ್ಲಿ 210 ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ Indian Navy Recruitment 2020
ಕೊಚ್ಚಿ, ಡಿಸೆಂಬರ್24: ಭಾರತೀಯ ನೌಕಾಪಡೆ ಶಾರ್ಟ್ ಸರ್ವಿಸ್ ಕಮಿಷನ್ (ಎಸ್‌ಎಸ್‌ಸಿ) ಅಧಿಕಾರಿಯ ನೇಮಕಾತಿಗಾಗಿ ಖಾಲಿ ಹುದ್ದೆಗಳನ್ನು ಪ್ರಕಟಿಸಿದೆ. ಕೋರ್ಸ್ ಜೂನ್ 2021 ರಿಂದ ಕೇರಳದ ಎಜಿಮಾಲಾದ ಭಾರತೀಯ ನೌಕಾ ಅಕಾಡೆಮಿಯಲ್ಲಿ (ಐಎನ್‌ಎ) ವಿವಿಧ ಶಾಖೆಗಳಿಗಾಗಿ ಪ್ರಾರಂಭವಾಗುತ್ತದೆ. 210 ಆಫೀಸರ್ ಹುದ್ದೆಗಳಿಗೆ ಅವಿವಾಹಿತ ಮಹಿಳಾ ಹಾಗೂ ಪುರುಷ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಕೋರಿ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಡಿಸೆಂಬರ್ 2020 ಆಗಿದೆ. Indian Navy Recruitment 2020
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ನವಲ್ ಓರಿಯೆಂಟೇಷನ್ ಕೋರ್ಸ್(ಎನ್‍ಒಸಿ), ನವಲ್ ಓರಿಯೆಂಟೇಷನ್ ಕೋರ್ಸ್ ರೆಗ್ಯುಲರ್, ಸ್ಪೆಷಲ್ ಎನ್‍ಒಸಿ ತರಬೇತಿಗಳನ್ನು ನೀಡಲಾಗುವುದು. ಈ ತರಬೇತಿಯ ಕಾಲಾವಧಿಯು ಹುದ್ದೆಗೆ ಅನುಗುಣವಾಗಿ 4 ವಾರದಿಂದ 44 ವಾರದವರೆಗೆ ಇರುತ್ತದೆ.
ಹುದ್ದೆಗಳ ವಿವರ
ಎಕ್ಸಿಕ್ಯೂಟೀವ್ ಶಾಖೆ
ಎಸ್‍ಎಸ್‍ಸಿ ಜನರಲ್ ಸರ್ವೀಸ್ (ಹೈಡ್ರೋ ಕೇಡರ್) – 40
ನವಲ್ ಆರ್ಮಮೆಂಟ್ (ಇನ್‍ಸ್ಪೆಕ್ಟೊರೇಟ್ ಕೇಡರ್) – 16
ಅಬ್ಸರ್ವರ್ – 6
ಪೈಲಟ್ – 15
ಲಾಜಿಸ್ಟಿಕ್ಸ್ – 20
ಎಸ್‍ಎಸ್‍ಸಿ ಎಕ್ಸ್ (ಐಟಿ) – 25
ತಾಂತ್ರಿಕ ವಿಭಾಗ
ಇಂಜಿನಿಯರಿಂಗ್ ಬ್ರಾಂಚ್ – 30
ಎಲೆಕ್ಟ್ರಿಕಲ್ ವಿಭಾಗ – 40
ಶೈಕ್ಷಣಿಕ ವಿಭಾಗ
ಎಸ್‍ಎಸ್‍ಸಿ ಎಜುಕೇಷನ್ – 18
ವಿದ್ಯಾರ್ಹತೆ: ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಮೈಕ್ರೋ ಎಲೆಕ್ಟ್ರಾನಿಕ್ಸ್, ಕಂಟ್ರೋಲ್ ಇಂಜಿನಿಯರಿಂಗ್, ಪ್ರೊಡಕ್ಷನ್, ಇಂಡಸ್ಟ್ರಿಯಲ್ ಪ್ರೊಡಕ್ಷನ್, ಕಂಪ್ಯೂಟರ್ ಅಪ್ಲಿಕೇಷನ್, ಮೆಟಲರ್ಜಿ, ಕೆಮಿಕಲ್, ಮೆಟಿರಿಯಲ್ ಸೈನ್ಸ್, ಏರೋ ಸ್ಪೇಸ್‍ನಲ್ಲಿ ಬಿಇ, ಬಿ.ಟೆಕ್, ಎಂಇ, ಎಂಟೆಕ್, ಎಂಇಎ, ಬಿಎಸ್ಸಿ, ಎಂಎಸ್ಸಿ(ಗಣಿತ, ಆಪರೇಷನಲ್ ರಿಸರ್ಚ್, ಫಿಜಿಕ್ಸ್, ನ್ಯೂಕ್ಲಿಯರ್ ಫಿಜಿಕ್ಸ್, ಕೆಮಿಸ್ಟ್ರಿ), ಎಂಎ (ಇಂಗ್ಲಿಷ್, ಇತಿಹಾಸ) ಪದವಿಗಳಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.
ವಯೋಮಿತಿ: ಅಬ್ಸರ್ವರ್ ಮತ್ತು ಪೈಲಟ್ ಹುದ್ದೆಗೆ 1997 ಜುಲೈ 2 ಹಾಗೂ 2002 ಜುಲೈ 1ರ ಮಧ್ಯೆ ಜನಿಸಿರಬೇಕು. ಶೈಕ್ಷಣಿಕ ವಿಭಾಗದ ಹುದ್ದೆಗಳಿಗೆ 1996 ಜುಲೈ 2 ಮತ್ತು 2000 ಜುಲೈ 1ರ ನಡುವೆ ಜನಿಸಿರಬೇಕು. ಉಳಿದ ಹುದ್ದೆಗಳಿಗೆ 1996 ಜುಲೈ 2 ಹಾಗೂ 2002 ಜನವರಿ 1ರ ಮಧ್ಯೆ ಜನಿಸಿರಬೇಕು.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳನ್ನು ಆಧರಿಸಿ ಅಭ್ಯರ್ಥಿಗಳನ್ನು 1 ಹುದ್ದೆಗೆ 40 ಜನರಂತೆ ಆಯ್ಕೆ ಮಾಡಲಾಗುವುದು. ಕೊನೆಯ ಸುತ್ತಿನಲ್ಲಿ ಆಯ್ಕೆ ಮಂಡಳಿಯು ಸಂದರ್ಶನ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಫೆಬ್ರುವರಿ 21ರ ನಂತರ ಬೆಂಗಳೂರು, ಭೋಪಾಲ್, ವಿಶಾಖಪಟ್ಟಣ, ಕೋಲ್ಕತ್ತಾಗಳಲ್ಲಿ ಸಂದರ್ಶನ ನಡೆಸಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31.12.2020
ಅಧಿಸೂಚನೆಗಾಗಿ: https://bit.ly/37HqYGV ಭೇಟಿ ಕೊಡಿ
ಹೆಚ್ಚಿನ ಮಾಹಿತಿಗೆ: http://www.joinindiannavy.gov.in ಗೆ ಭೇಟಿ ಕೊಡಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶೂನ್ಯ ಕ್ಯಾಲೊರಿಗಳನ್ನು ಹೊಂದಿರುವ ಸೂಪರ್ ಪವರ್‌ಫುಲ್ ಆಹಾರಗಳು https://t.co/5MztkNWqE9
— Saaksha TV (@SaakshaTv) December 21, 2020
ನಿಮ್ಮ ಆಧಾರ್ ಸಂಖ್ಯೆ ದುರ್ಬಳಕೆ ಆಗಿದೆಯೇ? ತಿಳಿಯುವುದು ಹೇಗೆ – ಇಲ್ಲಿದೆ ಮಾಹಿತಿhttps://t.co/iPUk4egRxi
— Saaksha TV (@SaakshaTv) December 21, 2020