ಮೈ ಝುಂ ಎನ್ನಿಸುವ ಭಾರತೀಯ ನೌಕಾಧಿಕಾರಿಗಳ ಕಠಿಣ ತರಬೇತಿ..!! – Part:3
ನೌಕಾಧಿಕಾರಿಗಳಾಗಲು ಎಂಥ ಕಠಿಣ ಪರಿಶ್ರಮ ಇರುತ್ತದೆ ಎನ್ನೋದನ್ನಾ ಹಿಂದಿನ ಸಂಚಿಕೆಯಲ್ಲಿ ನೋಡಿದ್ರಿ. ಇಂಥ ಕಠಿಣ ದೈಹಿಕ ಕಸರತ್ತುಗಳನ್ನು ಮಾಡಲು ಒಳ್ಳೆಯ ಆಹಾರ ಪದ್ಧತಿಯನ್ನು ಕೆಡೆಟ್ಗಳು ಮೈಗೂಡಿಸಿಕೊಂಡಿರುತ್ತಾರೆ. ಎಲ್ಲ ರೀತಿಯ ಸಮತೋಲನ ಆಹಾರ ನೀಡಲೆಂದೇ ಅಕಾಡೆಮಿಯಲ್ಲಿ ಜನರಿರುತ್ತಾರೆ. ಅಲ್ಲದೇ ಕೆಡೆಟ್ಗಳು ಊಟವನ್ನು ಮಾಡುವ ಬಗೆಯನ್ನು ನೋಡುವುದೇ ಚೆಂದ. ಯಾವ ಚಮಚ ವನ್ನು ಹೇಗೆ ಬಳಸಬೇಕು,ಶಿಸ್ತುಬದ್ಧ ವಾಗಿ ಹೇಗೆ ತಿನ್ನಬೇಕು ಎಂಬ ಬಗ್ಗೆ ಸೀನಿಯರ್ ಕೆಡೆಟ್ಗಳು ತರಬೇತಿ ನೀಡುತ್ತಾರೆ.
ಇನ್ನು ಅಕಾಡೆಮಿ ಸಢರಿದ ಕೆಡೆಟ್ಗಳು ಸಾಮಾನ್ಯರಂತೆ ಸ್ಟೈಲ್ ಮಾಡುವಂತಿಲ್ಲ. ಎಲ್ಲರಿಗೂ ಒಂದೇ ಬಗೆಯ ಹೇರ್ ಕಟ್ ಮಾಡಿಸುವುದು ಕಡ್ಡಾಯ. ಕೆಡೆಟ್‌ನ್ನು ಕೇವಲ ಅಧಿಕಾರಿಯನ್ನಾಗಿ ಮಾಡುವುದಲ್ಲದೇ ಓರ್ವ ಜೆಂಟಲ್‌ಮ್ಯಾನ್ ಆಗಿ ರೂಪಿಸಲು ಈ ಎಲ್ಲ ಅಂಶಗಳು ಕಡ್ಡಾಯ ಎಂದು ಅಧಿಕಾರಿಗಳು ಹೇಳುತ್ತಾರೆ. ದೈಹಿಕ , ಮಾನಸಿಕ ಪರಿಶ್ರಮದ ಜೊತೆಗೆ ಪಠ್ಯ ಚಡುವಡಿಕೆಗಳಿಗೂ ಕೆಡೆಟ್ ಸಮಯವನ್ನು ಮೀಸಲಿಡಬೇಕು. ಸೆಮಿಸ್ಟರ್ ಕೊನೆಗೆ ಇರುವ ಪರೀಕ್ಷೆಯಲ್ಲು ಉತ್ತೀರ್ಣರಾದ ನಂತರವಷ್ಟೇ ಮುಂದಿನ ಸೆಮೆಸ್ಟರ್ಗೆ ಪ್ರವೇಶ. ಇನ್ನು ಆಗಾಗ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಕೆಡೆಟ್ಗಳಿಗೆ ಹುರುಪು ತುಂಬುತ್ತವೆ.
ನಾಲ್ಕು ವರ್ಷಗಳ ಕಾಲ ಇಷ್ಟೆಲ್ಲ ಶ್ರಮ ವಹಿಸಿದ ಬಳಿಕ ಕೊನೆಯ ವರ್ಷದ ಪಾಸಿಂಗ್ ಔಟ್ ಪರೇಡ್ ಕೆಡೆಟ್ ಜೀವನದಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ.
ಅಧಿಕಾರಿಯಾಗುವ ಹೊಸ್ತಿಲಲ್ಲಿ ನಿಂತಿರುವ ಕೆಡೆಟ್ಗಳಿಗೆ ಅದು ಸ್ಮರಣೀಯ ದಿನ. ಕೆಡೆಟ್ ಆಗಿ ಭಾಗವಹಿಸುವ ಅಂತಿಮ ಪರೇಡ್ ನೋಡಲು ಎರಡು ಕಣ್ಣು ಸಾಲದು. ಉನ್ನತ ಮಟ್ಟದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕೆಡೆಟ್ ಗಳ ಪಾಲಕರಿಂದ ಆಫೀಸರ್ ಸ್ಟ್ರೈಪ್ ಗಳನ್ನು ತೊಡಿಸಲಾಗುತ್ತದೆ. ಈ ಖುಷಿಯನ್ನು ಎಲ್ಲ ಕೆಡೆಟ್ಗಳು ಸೇರಿ ಎಂಜಾಯ್ ಮಾಡ್ತಾರೆ. ಇದಾದ ಬಳಿಕ ಕೆಲವೇ ದಿನಗಳಲ್ಲಿ ದೇಶದಲ್ಲಿರುವ ನೌಕಾನೆಲೆಗಳಲ್ಲಿ ಸೇವೆಗೆ ನಿಯೋಜನೆಯಾಗುತ್ತಾರೆ.
ವಾಣಿ ಸೊನ್ನ