Tagenarine Chanderpaul ಭಾರತ ಮೂಲದ ಕ್ರಿಕೆಟಿಗ, ಚಂದರ್ಪಾಲ್ ಪುತ್ರ ಕ್ರಿಕೆಟ್ ಆಟಗಾರ, ಭಾರತದ ವಿರುದ್ಧ ಆಟ ಆಡುತ್ತಿರುವ ಭಾರತೀಯ ಮೂಲದ ಆಟಗಾರ, ವೆಸ್ಟ್ ಇಂಡೀಸ್ ಆಟಗಾರ ತಗೆನರೈನ್ ಚಂದರ್ಪಾಲ್.
ತಗೆನರೈನ್ ಚಂದರ್ಪಾಲ್ ಇತಿಹಾಸ
ಅಕ್ಟೋಬರ್‌ನಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಇದು 2025-27 ಸಾಲಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಮೊದಲ ವಿದೇಶಿ ಸರಣಿಯಾಗಲಿದೆ. ಅಕ್ಟೋಬರ್ 9 ರಿಂದ 6 ರವರೆಗೆ ಅಹಮಬಾದ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದ್ರೆ, ಅಕ್ಟೋಬರ್ ೧೦ರಿಂದ೧೪ರವರೆಗೆ ದೆಹಲಿಯಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಈಗಾಗಲೇ ಭಾರತ ಪ್ರವಾಸಕೈಗೊಳ್ಳಲಿರುವ ೧೫ ಆಟಗಾರರನ್ನೊಳಗೊಂಡಿರುವ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ರೋಸ್ಟನ್ ಚೇಸ್ ಅವರು ಕೆರೆಬಿಯನ್ ತಂಡವನ್ನು ಮುನ್ನಡೆಸಲಿದ್ದಾರೆ. ಜೊಮೆಲ್ ವಾರಿಕನ್ ಅವರು ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ದಿ…ಶೇಕ್ ಹ್ಯಾಂಡ್ ರಿಯಲ್ ಕಹಾನಿ..!
ಕೆರೆಬಿಯನ್ ತಂಡದಲ್ಲಿ ಟೆಗ್‌ನಾರಾಯಣ್ ಚಂದ್ರಪಾಲ್ ಮತ್ತೆ ಸ್ಥಾನ ಪಡೆದುಕೊಂಡಿದ್ದಾರೆ. ಟೆಗ್ ನರೇನ್ ವಿಂಡೀಸ್‌ನ ದೈತ್ಯ ಕ್ರಿಕೆಟಿಗ ಶಿವನಾರಾಯಣ್ ಚಂದ್ರಪಾಲ್ ಅವರ ಪುತ್ರ. ೨೦೨೨ರಲ್ಲಿ ವಿಂಡೀಸ್‌ನಲ್ಲಿ ಭಾರತದ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಶಿವನಾರಾಯಣ್ ಚಂದ್ರಪಾಲ್ ಅವರು ಭಾರತೀಯ ಮೂಲದವರು. ಈ ಹಿಂದೆ ಶಿವನರೇನ್ ಕೂಡ ಟೀಮ್ ಇಂಡಿಯಾ ಪ್ರವಾಸ ಮಾಡುತ್ತಿರುವಾಗ ತಮ್ಮ ಪೂರ್ವಿಕರ ಮನೆಗೆ ಭೇಟಿ ನೀಡುತ್ತಿದ್ದರು. ಈಗ ಪುತ್ರನೂ ಭೇಟಿ ನೀಡುವ ಸಾಧ್ಯತೆ ಇದೆ. ಅಂದ ಹಾಗೇ ಶಿವನಾರಾಯಣ್ ಚಂದ್ರಪಾಲ್ ಅವರು ಕೆರೆಬಿಯನ್ ಕ್ರಿಕೆಟ್‌ನಲ್ಲಿ ತನ್ನದೇ ಛಾಪು ಮೂಡಿಸಿದ್ದರು. ಅಲ್ಲದೆ ವಿಶ್ವಕ್ರಿಕೆಟ್‌ನ ಅಗ್ರಗಣ್ಯ ಆಟಗಾರನಾಗಿ ಹೆಸರು ಮಾಡಿದ್ದರು, ತನ್ನ ಕ್ರಿಕೆಟ್ ಬದುಕಿನಲ್ಲಿ ಎಲ್ಲಾ ಟೆಸ್ಟ್ ಮಾನ್ಯತೆ ಪಡೆದಿರುವ ದೇಶಗಳ ವಿರುದ್ಧ ಶತಕ ದಾಖಲಿಸಿದ್ದರು. ಅವರ ೩೦ ಟೆಸ್ಟ್ ಶತಕಗಳ ಪೈಕಿ ಏಳು ಶತಕಗಳನ್ನು ಭಾರತದ ವಿರುದ್ಧವೇ ಸಿಡಿಸಿದ್ದರು ಅನ್ನೋದು ವಿಶೇಷ.. ಇದೀಗ ಚಂದ್ರಪಾಲ್ ಪುತ್ರ ಟೆಗ್ ನಾರಾಯಣ್‌ಗೆ ಅಪ್ಪನ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ದೊಡ್ಡ ಸವಾಲಿದೆ.
ವೆಸ್ಟ್ ಇಂಡೀಸ್ ತಂಡ
ರೋಸ್ಟನ್ ಚೇಸ್ (ನಾಯಕ), ಜೊಮೆಲ್ ವಾರಿಕನ್ (ಉಪನಾಯಕ), ಆಲ್ಸಿಕ್ ಅಥಾನಾಜೆ,ಟೆಗ್ ನಾರಾಯಣ್ ಚಂದ್ರಪಾಲ್, ಜೋನ್ ಕ್ಯಾಂಬೆಲ್, ಕೈಸಿ ಕಾರ್ಟಿ,ಶಾಯ್ ಹೋಪ್ (ವಿಕೆಟ್ ಕೀಪರ್), ಟೆವಿನ್ ಐಮ್ಲಾಚ್, ಅಲ್ಙಾರಿ ಜೋಸೆಫ್, ಶಾಮ್ರಹ್ ಬ್ರೂಕ್ಸ್, ಬ್ರೆಂಡನ್ ಕಿಂಗ್, ಆಂಡೆಸ್ರನ್ ಫಿಲಿಪ್, ಖಾರ್ರೆ ಪಿರ್ರೆ, ಜೈಡನ್ ಸೀಲ್ಸ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








