ನ್ಯೂಜಿಲೆಂಡ್ ಇಲೆವೆನ್ 235 ರನ್?ಗಳಿಗೆ ಆಲೌಟ್
ಹ್ಯಾಮಿಲ್ಟನ್: ಟೀಂ ಇಂಡಿಯಾ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ಇಲೆವೆನ್, 235 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಆಲೌಟ್ ಆಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ, ಮೊದಲ ಇನ್ನಿಂಗ್ಸ್ ನಲ್ಲಿ 263 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ನಂತರ ಇನ್ನಿಂಗ್ಸ್ ಶುರು ಮಾಡಿದ ಕಿವೀಸ್ ಇಲೆವೆನ್, ಆರಂಭದಿಂದಲೇ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ 34 ರನ್, ಹೆನ್ರಿ ಕೂಪರ್ 40 ರನ್, ಟಾಮ್ ಬ್ರುಸ್ 31, ಮಿಚೆಲ್ 32 ರನ್ ಗಳಿಸಿದ್ದು ಬಿಟ್ಟರೇ ಉಳಿದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ ನ್ಯೂಜಿಲೆಂಡ್ ಇಲೆವೆನ್, 235 ರನ್ ಗಳಿಗೆ ಆಲೌಟಾಯಿತು.
ಭಾರತದ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದ್ರೆ, ಉಮೇಶ್ ಯಾದವ್ 2, ನವ್ದೀಪ್ ಸೈನಿ 2, ಜಸ್ಪ್ರೀತ್ ಬೂಮ್ರಾ 2 ವಿಕೆಟ್ ಪಡೆದು ಮಿಂಚಿದ್ರು.
ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ, ಕಿವೀಸ್ ಬೌಲರ್ ಗಳಿಗೆ ತಕ್ಕ ಉತ್ತರ ನೀಡುತ್ತಿದೆ.