Indian Railway : ಭಾರತೀಯ ರೈಲ್ವೇ ಬಗ್ಗೆ ವಿಶೇಷ ವಿಚಾರಗಳು..!!
ಭಾರತೀಯ ರೈಲ್ವೇ ವಿಶ್ವದ ಅತಿದೊಡ್ಡ ರೈಲು ವ್ಯವಸ್ಥೆಗಳಲ್ಲಿ ಒಂದಾಗಿದೆ. ಉದ್ಯೋಗಗಳ ಅವಕಾಶ ವಿಚಾರದಲ್ಲಿ ಇದು ವಿಶ್ವದಲ್ಲಿ 8 ನೇ ಸ್ಥಾನದಲ್ಲಿದೆ..
ದೇಶದ ಮೊದಲ ಪ್ಯಾಸೆಂಜರ್ ರೈಲು ಏಪ್ರಿಲ್ 16, 1853 ರಂದು ಬಾಂಬೆ ಮತ್ತು ಥಾಣೆ ನಡುವೆ ಆರಂಭವಾಗಿತ್ತು..
ಭಾರತದಲ್ಲಿ ಅತ್ಯಂತ ನಿಧಾನವಾದ ರೈಲು ಮೆಟ್ಟುಪಾಳ್ಯಂ-ಊಟಿ ನೀಲಗಿರಿ ಪ್ಯಾಸೆಂಜರ್ ರೈಲು 10 ಕಿಮೀ ವೇಗದಲ್ಲಿ ಚಲಿಸುತ್ತದೆ ಮತ್ತು ವೇಗವಾದ ವಂದೇ ಭಾರತ್ ಎಕ್ಸ್ಪ್ರೆಸ್ ಅಥವಾ ರೈಲು 18 ಗಂಟೆಗೆ 180 ಕಿಮೀ ವೇಗದಲ್ಲಿ ಚಲಿಸುತ್ತದೆ.
ಅಸ್ಸಾಂನ ಬ್ರಹ್ಮಪುತ್ರ ನದಿಯ ಮೇಲಿರುವ ಬೋಗಿಬೀಲ್ ಸೇತುವೆಯು ಭಾರತದ ಅತಿ ಉದ್ದದ ರೈಲು ಮತ್ತು ರಸ್ತೆ ಸೇತುವೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಮಧ್ಯದಲ್ಲಿರುವ ಹಿಮಾಲಯದ ಪೀರ್ ಪಂಜಾಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಪಿರ್ ಪಂಜಾಲ್ ರೈಲು ಸುರಂಗವು ಭಾರತದ ಅತಿ ಉದ್ದದ ರೈಲು ಸುರಂಗವಾಗಿದೆ.
ಭಾರತೀಯ ರೈಲ್ವೇಯು ಯುನೆಸ್ಕೋದಿಂದ ಗುರುತಿಸಲ್ಪಟ್ಟ ನಾಲ್ಕು ವಿಶ್ವ ಪರಂಪರೆಯ ತಾಣಗಳನ್ನು ಹೊಂದಿದೆ.
7 ರೈಲು ಮಾರ್ಗಗಳು ಮಥುರಾ ಜಂಕ್ಷನ್ನಲ್ಲಿ ಏಕಕಾಲದಲ್ಲಿ ಚಲಿಸುತ್ತವೆ.. ಇದು ಗರಿಷ್ಠ ಸಂಖ್ಯೆಯ ರೈಲು ಮಾರ್ಗಗಳನ್ನು ಹೊಂದಿರುವ ಜಂಕ್ಷನ್ ಆಗಿದೆ.
ಭಾರತೀಯ ರೈಲ್ವೆಯ ಅತ್ಯಂತ ಜನನಿಬಿಡ ರೈಲು ನಿಲ್ದಾಣವೆಂದರೆ ಹೌರಾ ಜಂಕ್ಷನ್, ಇದು ಗರಿಷ್ಠ ಸಂಖ್ಯೆಯ ಪ್ಲಾಟ್ ಫಾರ್ಮ್ ಗಳನ್ನು ಹೊಂದಿದೆ.
ಗೋರಖ್ ಪುರವು ವಿಶ್ವದ ಅತಿ ಉದ್ದದ ಫ್ಲಾಟ್ ಫಾರ್ಮ್ ಹೊಂದಿದೆ, ಇದು 4,483 ಅಡಿ ಉದ್ದವಾಗಿದೆ.
ಹೌರಾ-ಅಮೃತಸರ ಎಕ್ಸ್ಪ್ರೆಸ್ ಗರಿಷ್ಠ ಸಂಖ್ಯೆಯ ನಿಲುಗಡೆಗಳನ್ನು ಹೊಂದಿದೆ (115 ನಿಲುಗಡೆಗಳು)..
ಚಿಕ್ಕ ನಿಲ್ದಾಣದ ಹೆಸರು IB (ಒಡಿಶಾ) ಮತ್ತು ಉದ್ದವಾದ ನಿಲ್ದಾಣವು ಶ್ರೀ ವೆಂಕಟನರಸಿಂಹರಾಜುವಾರಿಪೇಟಾ (ತಮಿಳುನಾಡು).
ಲಾರ್ಡ್ ಡಾಲ್ಹೌಸಿಯನ್ನು ಭಾರತೀಯ ರೈಲ್ವೆಯ ಪಿತಾಮಹ ಎಂದು ಕರೆಯಲಾಗುತ್ತದೆ
ಜಾನ್ ಮಥಾಯ್ ಭಾರತದ ಮೊದಲ ರೈಲ್ವೆ ಮಂತ್ರಿ.
ಭಾರತೀಯ ರೈಲ್ವೇಯು 5 ರಾಯಲ್ ರೈಲುಗಳ ನಿರ್ವಾಹಕವಾಗಿದೆ .. ಅವುಗಳೆಂದರೆ ರಾಯಲ್ ರಾಜಸ್ಥಾನ ಆನ್ ವೀಲ್ಸ್, ಪ್ಯಾಲೇಸ್ ಆನ್ ವೀಲ್ಸ್, ದಿ ಗೋಲ್ಡನ್ ಚಾರಿಯಟ್, ದಿ ಮಹಾರಾಜ ಎಕ್ಸ್ಪ್ರೆಸ್ ಮತ್ತು ದಿ ಡೆಕ್ಕನ್ ಒಡಿಸ್ಸಿ.