Indian Railways: ರೈಲ್ವೆ ಹಳಿ ಕಾಮಗಾರಿ ಪ್ರಯುಕ್ತ ಇಂದು 141 ರೈಲು ರದ್ದು…
ಭಾರತೀಯ ರೈಲ್ವೆ ಇಲಾಖೆ ಭಾನುವಾರ ಪ್ರಯಾಣಿಕರಿಗೆ ಹೊಸ ಎಚ್ಚರಿಕೆಯನ್ನ ನೀಡಿದೆ. ಹಳಿ ನಿರ್ವಹಣಾ ಕಾಮಗಾರಿಯಿಂದಾಗಿ ಭಾನುವಾರ ದೇಶಾದ್ಯಂತ 141 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಹಳಿಗಳ ಕಾರ್ಯಾಚರಣೆ ಮತ್ತು ನಿರ್ವಹಣಾ ಕಾರ್ಯದಿಂದಾಗಿ 141 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ (IRCTC) ತಿಳಿಸಿದೆ. ಭಾನುವಾರ ಇನ್ನೂ 25 ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಲಾಗಿದೆ ಮತ್ತು 10 ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.
ಪುಣೆ, ಲೋನಂದ್, ಸತಾರಾ, ಅಜಿಂಗಂಜ್, ಗೋರಖ್‌ಪುರ, ಮೊರಾದಾಬಾದ್, ಪಟಾನ್ ಕೋಟ್, ರಾಮನಗರ, ರಾಯ್‌ಪುರ, ಲಖನೌ, ವಾರಣಾಸಿ, ಸೀಲ್ಡಾ ಮತ್ತು ಸೀತಾಪುರ ಮಾರ್ಗಗಳಲ್ಲಿ ರೈಲು ಸೇವೆಯನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ವಿವರಿಸಿದರು.
ರದ್ದಾದ ರೈಲುಗಳ ವಿವರವನ್ನು ರೈಲ್ವೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.ರೈಲುಗಳ ರದ್ದತಿಯಿಂದಾಗಿ ರೈಲ್ವೇಯ ಪ್ರಯಾಣಿಕರು ತೀವ್ರ ತೊಂದರೆಗೀಡಾಗಿದ್ದಾರೆ.
Indian Railways: 141 trains canceled today due to railway track work…








