ಡಾಲರ್ ಎದುರು ದುರ್ಬಲಗೊಂಡ ರೂಪಾಯಿ ಮೌಲ್ಯ…!
ಅಮೆರಿಕಾ ಡಾಲರ್ ಎದುರು ರೂಪಾಯಿ ದುರ್ಬಲಗೊಂಡಿದೆ. ದೇಶದಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳ ಹೆಚ್ಚಳ ಮತ್ತು ಎಫ್‌ಪಿಐ ಹೊರಹರಿವಿನ ಭೀತಿಯಿಂದಾಗಿ ಡಾಲರ್ ಎದುರು ರೂಪಾಯಿ ಕುಸಿತ ಕಂಡಿದೆ. ಅಮೆರಿಕಾ ಡಾಲರ್ ಎದುರು ರೂಪಾಯಿ 75.01 ಕ್ಕೆ ಕೊನೆಗೊಂಡಿತು. ಇದು ಹಿಂದಿನ ವಹಿವಾಟಿನ ಮುಕ್ತಾಯಕ್ಕಿಂತ 7 ಪೈಸೆಯಷ್ಟು ಕುಸಿತವನ್ನು ದಾಖಲಿಸಿತು.
ಕೋವಿಡ್-19 ಪಾಸಿಟಿವ್ ಪ್ರಕರಣಗಳ ಉಲ್ಬಣವು ಭಾರತದ ಆರ್ಥಿಕ ಚೇತರಿಕೆಗೆ ಅಡ್ಡಿಪಡಿಸುವ ಬಗ್ಗೆ ಕಳವಳಗೊಂಡಿರುವ ವಿದೇಶಿ ಬಂಡವಾಳ ಹೂಡಿಕೆದಾರರು, ಈ ತಿಂಗಳಲ್ಲಿ ಹೆಚ್ಚಿನ ಮಾರಾಟಕ್ಕೆ ಮುಂದಾಗಿದ್ದಾರೆ. ಎಫ್‌ಪಿಐಗಳು 1,361 ಕೋಟಿ ರೂ.ಗಳ ಷೇರುಗಳನ್ನು ಮಾರಾಟ ಮಾಡಿದ್ದು, ಏಪ್ರಿಲ್‌ನಲ್ಲಿ ಒಟ್ಟು ಹೊರಹರಿವು ಸುಮಾರು 8,700 ಕೋಟಿ ರೂ. ನಷ್ಟಿದೆ.
ಅಮೆರಿಕಾ ಅಧ್ಯಕ್ಷ ಜೋ ಬಿಡನ್ ಅವರ ಉನ್ನತ ಆದಾಯ ತೆರಿಗೆ ಮತ್ತು ಬಂಡವಾಳದ ಲಾಭದ ಮೇಲಿನ ತೆರಿಗೆಯನ್ನು ಹೆಚ್ಚಿಸುವ ಯೋಜನೆಯು ಭಾರತೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.