Indian Rupees : 2022 ರಲ್ಲಿ ಭಾರತೀಯ ಕರೆನ್ಸಿ ಸಾಧನೆ ಕಳಪೆ..
2022 ರಲ್ಲಿ ಏಷ್ಯಾದಲ್ಲಿ ಅತಿ ಕಳಪೆ ಸಾಧನೆ ತೋರಿದ ಕರೆನ್ಸಿ ಭಾರತದ ರೂಪಾಯಿ ಎನ್ನಲಾಗಿದೆ..
ಹೌದು..!
ಯುಎಸ್ ಫೆಡರಲ್ ಬ್ಯಾಂಕ್ (US Federal Reserve) ಹಣಕಾಸು ನೀತಿಯಿಂದಾಗಿ ಭಾರತದ ರೂಪಾಯಿ ಮೌಲ್ಯ 2022ರ ವರ್ಷಾಂತ್ಯಕ್ಕೆ ಶೇ.11.3 ರಷ್ಟು ಕುಸಿತಕಂಡಿದೆ.
ಈ ವರ್ಷಾಂತ್ಯಕ್ಕೆ ಅತೀ ಕೆಟ್ಟ ಸಾಮರ್ಥ್ಯ ತೋರಿದ್ದು, ಈ ಮೂಲಕ 2013ರ ನಂತರದಲ್ಲಿ ಅತಿಹೆಚ್ಚು ವಾರ್ಷಿಕ ಮೌಲ್ಯ ಕುಸಿತವಾಗಿರುವ ಏಷ್ಯನ್ ಕರೆನ್ಸಿ ಎಂಬ ಅಪಖ್ಯಾತಿಗೆ ಪಾತ್ರವಾಗಿದೆ.
2021ರ ಅಂತ್ಯದಲ್ಲಿ 74.33 ರೂ. ಇದ್ದ ಡಾಲರ್ ಮೌಲ್ಯ 2022ರ ಅಂತ್ಯದ ವೇಳೆಗೆ 82.75 ರೂಪಾಯಿವರೆಗೆ ಏರಿಕೆ ಕಂಡಿದೆ.
ರಷ್ಯಾ ಮತ್ತು ಉಕ್ರೇನ್ ಸಂಘರ್ಷದಿಂದ ತೈಲ ಬೆಲೆಯಲ್ಲಿ ಏರಿಳಿತಗಳಿಂದಾಗಿ ರೂಪಾಯಿ ಮೌಲ್ಯ ಕುಸಿತವಾಯಿತು. ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಚಾಲ್ತಿ ಖಾತೆಯ ಕೊರತೆಯನ್ನು ಗರಿಷ್ಠ ಮಟ್ಟಕ್ಕೆ ತಳ್ಳಿತು. ಸದ್ಯ ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂಪಾಯಿ ಮೌಲ್ಯವು 81.50 ರೂ. ನಿಂದ 83.50 ರೂ. ನಡುವೆ ಇರಲಿದೆ.
2023ರಲ್ಲಿ ಇದಕ್ಕೆ ಸೂಕ್ತ ಪರಿಹಾರ ಸಿಗುವ ಅಭಿಪ್ರಾಯವನ್ನ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ..