ಚೀನಾದಲ್ಲಿ ಸಿಲುಕಿರುವ ಭಾರತದ ನಾವಿಕರ ಬಿಡುಗಡೆಗೆ ಕೊನೆಗೂ ಚೀನಾ ಒಪ್ಪಿಗೆ
ಭಾರತದ 16 ನಾವಿಕರಿಗೆ ಬಿಡುಗಡೆ ನೀಡಲು ಕೊನೆಗೂ ಚೀನಾ ಒಪ್ಪಿಗೆ ಸೂಚಿಸಿದೆ. ಚೀನಾದ ಕಾವೊಫೀಡಿಯನ್ ಬಂದರಿನಲ್ಲಿ ಸೆಪ್ಟೆಂಬರ್ ನಿಂದಲೂ ಸಿಲುಕಿರುವ 16 ನಾವಿಕರನ್ನು ಭಾರತಕ್ಕೆ ಹಸ್ತಾಂತರಿಸಲು ಚೀನಾ ಒಪ್ಪಿಕೊಮಡಿದೆ ಎನ್ನಲಾಗಿದೆ.
ಭಾರತದ ಸರಕು ಸಾಗಣೆ ಹಡಗಿನಲ್ಲಿರುವ 16 ನಾವಿಕರನ್ನು ಆದಷ್ಟು ಬೇಗನೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಭರವಸೆ ವ್ಯಕ್ತಪಡಿಸಿದ್ದಾರೆ. ಬೀಜಿಂಗ್‌ನಲ್ಲಿರುವ ನಮ್ಮ ರಾಯಭಾರ ಕಚೇರಿಯ ನಿರಂತರ ಪ್ರಯತ್ನದ ಬಳಿಕ, ಎಂವಿ ಅನಸ್ತೇಷಿಯಾ ಹಡಗಿನಲ್ಲಿರುವ ಸಿಬ್ಬಂದಿಯನ್ನು ವರ್ಗಾಯಿಸಲು ಟಂಗ್ಷನ್ ನಲ್ಲಿನ ಸ್ಥಳೀಯ ವಿದೇಶಾಂಗ ಕಚೇರಿ ಮತ್ತು ಬಂದರು ಅಧಿಕಾರಿಗಳಿಗೆ ಚೀನಾದ ಕೇಂದ್ರ ಅಧಿಕಾರಿಗಳು ತಮ್ಮ ಅನುಮತಿಯನ್ನು ರವಾನಿಸಿದ್ದಾರೆ ಎಂದು ಅನುರಾಗ್ ಹೇಳಿದ್ದಾರೆ.
SBIನಲ್ಲಿ ಅಪ್ರಾಪ್ತ ಮಕ್ಕಳಿಗೆ ಖಾತೆ ತೆರೆಯುವ ಅವಕಾಶ : ಇಲ್ಲಿದೆ ಸಂಪೂರ್ಣ ಮಾಹಿತಿ..!
ಕಳೆದ ವರ್ಷದ ಸೆಪ್ಟೆಂಬರ್ 20ರಿಂದಲೂ ಎಂವಿ ಅನಸ್ತೇಷಿಯಾ ಹಡಗು ಚೀನಾದ ಕಾವೊಫೀಡಿಯನ್ ಬಂದರಿನಲ್ಲಿ ಸಿಲುಕಿಕೊಂಡಿದೆ. ಕೋವಿಡ್ ನಿಯಮಗಳ ಕಾರಣವೊಡ್ಡಿ ಚೀನಾ ಅಲ್ಲಿಂದ ಹಡಗನ್ನು ಕಳುಹಿಸಲು, ನಾವಿಕರನ್ನು ಬದಲಿಸಲು ಕೂಡ ಅವಕಾಶ ನೀಡುತ್ತಿಲ್ಲ. ಭಾರತದ ಮತ್ತೊಂದು ಹಡಗು ಎಂವಿ ಜಾಗ್ ಆನಂದ್ ಜೂನ್ 13ರಿಂದಲೂ ಹೆಬೀ ಪ್ರಾಂತ್ಯದ ಜಿಂಗ್ ಟಾಂಗ್ ಬಂದರಿನಲ್ಲಿ ಸಿಲುಕಿಕೊಂಡಿದೆ. ಇದರಲ್ಲಿಯೂ ಭಾರತದ 23 ನಾವಿಕರು ಇದ್ದರು. ಈ ಹಡಗಿನ ನಾವಿಕರನ್ನು ಬದಲಿಸಲು ಚೀನಾ ಕಳೆದ ತಿಂಗಳು ಒಪ್ಪಿಗೆ ಸೂಚಿಸಿತ್ತು.
ರೆಪೋ ದರ ಯಥಾಸ್ಥಿತಿ – RBI : ಹಾಗಾದ್ರೆ ರೆಪೋ, ರಿವರ್ಸ್ ರೆಪೋ ದರ ಎಂದರೇನು..?
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








