ಲಂಕಾ ಪ್ರವಾಸಕ್ಕೆ ಮುನ್ನ ಮುಂಬೈನಲ್ಲಿ ಟೀಮ್ ಇಂಡಿಯಾ ಆಟಗಾರರು ಕ್ವಾರಂಟೈನ್..!
ಶಿಖರ್ ಧವನ್ ನಾಯಕತ್ವ ಮತ್ತು ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಜುಲೈ ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಶ್ರೀಲಂಕಾ ವಿರುದ್ಧ ಮೂರು ಏಕದಿನ ಮತ್ತು ಮೂರು ಟಿ-ಟ್ವೆಂಟಿ ಪಂದ್ಯಗಳನ್ನು ಟೀಮ್ ಇಂಡಿಯಾ ಆಡಲಿದೆ. ಏಕದಿನ ಪಂದ್ಯ ಜುಲೈ 13ರರಿಂದ ಆರಂಭವಾದ್ರೆ, ಟಿ-ಟ್ವೆಂಟಿ ಪಂದ್ಯ ಜುಲೈ 21ರಿಂದ ಶುರುವಾಗಲಿದೆ.
ಇದೀಗ ಟೀಮ್ ಇಂಡಿಯಾ ಲಂಕಾ ಪ್ರವಾಸಕ್ಕೆ ರೆಡಿಯಾಗುತ್ತಿದೆ. ಕೋವಿಡ್ ಮಾರ್ಗಸೂಚಿಯಂತೆ ಟೀಮ್ ಇಂಡಿಯಾ ಜೂನ್ 14ರಿಂದ 29ರವರೆಗೆ ಮುಂಬೈ ನಲ್ಲಿ ಕ್ವಾರಂಟೈನ್ ನಲ್ಲಿರಲಿದೆ. ಇದೇ ವೇಳೆ ಪ್ರತಿ ಆಟಗಾರರು ಆರು ಬಾರಿ ಆರ್ ಟಿಪಿಸಿಆರ್ ಟೆಸ್ಟ್ ಗೆ ಒಳಪಡಲಿದ್ದಾರೆ. ಆ ನಂತರವೇ ಟೀಮ್ ಇಂಡಿಯಾ ಶ್ರೀಲಂಕಾಗೆ ಪ್ರಯಾಣ ನಡೆಸಲಿದೆ.
ಶ್ರೀಲಂಕಾದಲ್ಲಿ ಅಲ್ಲಿನ ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಬಿಸಿಸಿಐ ಒಪ್ಪಿಕೊಂಡಿದೆ. ಏಕದಿನ ಮತ್ತು ಟಿ-ಟ್ವೆಂಟಿ ಪಂದ್ಯಗಳು ಕೊಲೊಂಬೊದಲ್ಲಿ ನಡೆಯಲಿದೆ.
ಭಾರತ ತಂಡಕ್ಕೆ ಶಿಖರ್ ಧವನ್ ನಾಯಕನಾದ್ರೆ, ಭುವನೇಶ್ವರ್ ಕುಮಾರ್ ಉಪನಾಯಕನಾಗಿದ್ದಾರೆ. ಮೊದಲ ಬಾರಿ ಟೀಮ್ ಇಂಡಿಯಾದ ಸೀನಿಯರ್ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್ ಆಗಿದ್ದಾರೆ.