ಮಾನವೀಯತೆಯೇ ಎಲ್ಲಕ್ಕಿಂತ ಮೊದಲು ಎಂದು ಸಾಬೀತು ಮಾಡಿದ ಭಾರತೀಯ ಯೋಧರು
ಸಿಕ್ಕಿಂ, ಸೆಪ್ಟೆಂಬರ್06: ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಘರ್ಷಣೆಯ ಮಧ್ಯೆ, ಸಿಕ್ಕಿಂನಲ್ಲಿ ಸಿಕ್ಕಿಬಿದ್ದ ಮೂವರು ಚೀನಾದ ಪ್ರಜೆಗಳನ್ನು ಭಾರತೀಯ ಸೇನೆಯು ರಕ್ಷಿಸಿದೆ. ಈ ಘಟನೆಯು ಸೆಪ್ಟೆಂಬರ್ 3 ರಂದು ನಡೆದಿದೆ.
ಚೀನಾದ ಪ್ರಜೆಗಳು ಉತ್ತರ ಸಿಕ್ಕಿಂನ ಪ್ರಸ್ಥಭೂಮಿ ಪ್ರದೇಶದಲ್ಲಿ ತೀವ್ರ ಹವಾಮಾನ ಪರಿಸ್ಥಿತಿಯಲ್ಲಿ 17,500 ಅಡಿ ಎತ್ತರದಲ್ಲಿ ದಾರಿ ತಪ್ಪಿ ಪರದಾಡುತ್ತಿದ್ದರು. ಭಾರತೀಯ ಸೇನೆ ಅವರಿಗೆ ಆಹಾರ, ಬೆಚ್ಚಗಿನ ಬಟ್ಟೆ ಮತ್ತು ವೈದ್ಯಕೀಯ ಸೌಲಭ್ಯವನ್ನು ಒದಗಿಸಿದೆ. ನಂತರ ಭಾರತೀಯ ಪಡೆಗಳು ಅವರ ಸೇರಬೇಕಿದ್ದ ಸ್ಥಳದ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿದೆ.
ಈ ಕುರಿತು ಭಾರತೀಯ ಸೇನೆ ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದು, ಇಂಡಿಯನ್ ಆರ್ಮಿ ಭಾರತದಲ್ಲಿ ತೀವ್ರ ಹವಾಮಾನ ಪರಿಸ್ಥಿತಿಯಲ್ಲಿ 17,500 ಅಡಿ ಎತ್ತರದಲ್ಲಿ ನಾರ್ತ್ ಸಿಕ್ಕಿಂನ ಚೀನಾ ಗಡಿಯಲ್ಲಿ ಸಿಕ್ಕಿಬಿದ್ದ ಚೀನೀ ನಾಗರಿಕರಿಗೆ ಸಹಾಯ ಮತ್ತು ವೈದ್ಯಕೀಯ ಸಹಾಯವನ್ನು ನೀಡಿದೆ ಎಂದು ಬರೆದು ಚೀನೀ ಪ್ರಜೆಗಳಿಗೆ ಸಹಾಯ ಮಾಡಿದ ಫೋಟೋಗಳನ್ನು ಹಂಚಿಕೊಂಡಿದೆ.
ಒಂದೆಡೆ ಅರುಣಾಚಲ ಪ್ರದೇಶದಲ್ಲಿ ಬೇಟೆಯಾಡಲು ಹೋದ ಭಾರತೀಯರನ್ನು ಚೀನೀ ಸೈನಿಕರು ಅಪಹರಿಸಿರುವಾಗ ದಾರಿ ತಪ್ಪಿ ಪರದಾಡುತ್ತಿದ್ದ ಚೀನೀ ಪ್ರಜೆಗಳಿಗೆ ಸಹಾಯ ಮಾಡಿ ಭಾರತದ ಯೋಧರಿಗೆ ಮಾನವೀಯತೆಯೇ ಎಲ್ಲಕ್ಕಿಂತ ಮೊದಲು ಎಂದು ಸಾಬೀತು ಮಾಡಿದೆ.
https://twitter.com/adgpi/status/1302137608697335808?s=19








