ಕೊರೊನಾ ಟೆಸ್ಟ್ಗೆ ಹಣವಿಲ್ಲದೆ ತಾಯ್ನಾಡಿಗೆ ಮರಳಲು ಪರದಾಡ್ತಿರುವ ಭಾರತೀಯ ಮಹಿಳೆ..!
ಸೌದಿ ಅರೇಬಿಯಾದಲ್ಲಿ 40 ವರ್ಷದ ಭಾರತೀಯ ಮಹಿಳೆಯೊಬ್ಬಳು ತಾಯ್ನಾಡಿಗೆ ವಾಪಸ್ ಬರಲು ಹಣವಿಲ್ಲದೆ ಪರಡಾಡುತ್ತಿದ್ದಾರೆ. ಹೌದು ವಿಮಾನದ ಮೂಲಕ ಭಾರತಕ್ಕೆ ಬರುವ ಮೊದಲು ಕೊರೊನಾ ಟೆಸ್ಟ್ ಮಾಡಿಸಲೇ ಬೇಕು. ಆದ್ರೆ ಕೊರೊನಾ ಟೆಸ್ಟ್ ಗೆ ಹಣವಿಲ್ಲದೆ ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೌದು ಈಕೆ ಸೌದಿ ಅರೇಬಿಯಾದಲ್ಲಿ ತನ್ನನ್ನು ಉದ್ಯೋಗದಾತ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆಂದು ಆರೋಪಿಸಿ ಭಾರತಕ್ಕೆ ಹಿಂದಿರುಗಲು ಹೊರಟಿದ್ದರು. ಆದ್ರೆ ಕೊರೊನಾ ಪರೀಕ್ಷೆ ನಡೆಸಲು ಹಣ ಪಾವತಿಸಲು ಸಾಧ್ಯವಾಗದ ಕಾರಣ ತನಗೆ ವಿಮಾನ ಹತ್ತಲು ಅವಕಾಶ ನೀಡಲಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಮಧ್ಯಪ್ರದೇಶದ ಹರ್ಡಾ ಜಿಲ್ಲೆಯ ರೀನಾ ಗೆಹ್ಲೋಟ್ ನವೆಂಬರ್ ನಲ್ಲಿ ವಿಡಿಯೋ ಸಂದೇಶದ ಮೂಲಕ ಸಹಾಯಕ್ಕಾಗಿ ಮನವಿ ಮಾಡಿದ್ದರು. ಇದಾದ ಬಳಿಕ ಸೌದಿ ಅರೇಬಿಯಾದ ಭಾರತೀಯ ರಾಯಭಾರ ಕಚೇರಿ ಮಹಿಳೆಯ ಸಹಾಯಕ್ಕೆ ಮುಂದಾಗಿತ್ತು. ಆಶ್ರಯಧಾಮದಲ್ಲಿ ನೆಲೆಸಿರುವ ಮಹಿಳೆ, ಕೊರೊನಾ ಟೆಸ್ಟ್ ನಡೆಸಲು 17 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ.
ವೇಸ್ಟ್ ಅಂತ ಬಿಸಾಡಿದ್ದ ಮೊಬೈಲ್ ಕವರ್ ಗೆ ಸಿಕ್ತು 1.19 ಕೋಟಿ ರೂ…!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel