ಸೌದಿ ಅರೇಬಿಯಾದಲ್ಲಿ ಭಿಕ್ಷೆ ಬೇಡುತ್ತಿರುವ ಭಾರತೀಯ ಕಾರ್ಮಿಕರು
ಸೌದಿ ಅರೇಬಿಯಾ, ಸೆಪ್ಟೆಂಬರ್21: ಕೋವಿಡ್-19 ಸಾಂಕ್ರಾಮಿಕವು ಅನೇಕ ಜನರ ದೈನಂದಿನ ಜೀವನೋಪಾಯವನ್ನು ಕಸಿದುಕೊಂಡಿದೆ. ಇತ್ತೀಚಿನ ಬೆಳವಣಿಗೆಯ ಪ್ರಕಾರ, ಸೌದಿ ಅರೇಬಿಯಾದಲ್ಲಿ 450 ಭಾರತೀಯ ಕಾರ್ಮಿಕರು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು ಎಂದು ವರದಿಯಾಗಿದೆ. ಕಾರ್ಮಿಕರು ಮುಖ್ಯವಾಗಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಬಿಹಾರ, ದೆಹಲಿ, ರಾಜಸ್ಥಾನ ಮತ್ತು ಕರ್ನಾಟಕ ರಾಜ್ಯದವರು ಎಂದು ಹೇಳಲಾಗಿದೆ. ಈ ಕಾರ್ಮಿಕರ ಕೆಲಸದ ಪರವಾನಗಿ ಅವಧಿ ಮೀರಿವೆ ಮತ್ತು ಅವರ ಪರಿಸ್ಥಿತಿ ಹದಗೆಟ್ಟಿರುವುದರಿಂದ ಅವರು ಭಿಕ್ಷೆ ಬೇಡಬೇಕಾಯಿತು. ನಂತರ ಕಾರ್ಮಿಕರನ್ನು ಬಂಧನ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು.
ಜೆಡ್ಡಾದ ಶುಮೈಸಿ ಬಂಧನ ಕೇಂದ್ರಕ್ಕೆ ಕಾರ್ಮಿಕರನ್ನು ಕರೆದೊಯ್ಯುವ ವೀಡಿಯೊಗಳು ವೈರಲ್ ಆಗಿವೆ. ಕಾರ್ಮಿಕರಲ್ಲಿ 39 ಉತ್ತರ ಪ್ರದೇಶ ರಾಜ್ಯಕ್ಕೆ ಸೇರಿದವರು, 10 ಮಂದಿ ಬಿಹಾರಕ್ಕೆ ಸೇರಿದವರು, 5 ಮಂದಿ ತೆಲಂಗಾಣಕ್ಕೆ ಸೇರಿದವರು ಮತ್ತು ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ಕರ್ನಾಟಕ ರಾಜ್ಯದಿಂದ ತಲಾ ನಾಲ್ಕು ಮಂದಿ ಸೇರಿದ್ದಾರೆ. ಕಾರ್ಮಿಕರು ತಾವು ಯಾವುದೇ ಅಪರಾಧ ಮಾಡಿಲ್ಲ ಆದರೆ ಕೆಲಸ ಕಳೆದುಕೊಂಡು ಅಸಹಾಯಕರಾಗಿದ್ದರಿಂದ ಭಿಕ್ಷೆ ಬೇಡಬೇಕಾಯಿತು ಎಂದು ಹೇಳಿದ್ದಾರೆ.