ADVERTISEMENT
Saturday, March 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಗ ಗೆದ್ದಿದ್ದು ಬೆಳ್ಳಿ.. ಆದ್ರೆ ಆ ಬೆಳ್ಳಿಯೇ ಈಗ ಬಂಗಾರವಾಗಿದ್ದು ಹೇಗೆ ?

admin by admin
July 24, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಆಗ ಗೆದ್ದಿದ್ದು ಬೆಳ್ಳಿ.. ಆದ್ರೆ ಆ ಬೆಳ್ಳಿಯೇ ಈಗ ಬಂಗಾರವಾಗಿದ್ದು ಹೇಗೆ ?

ಅದು 2018ರ ಜಕಾರ್ತಾ ಏಷ್ಯನ್ ಗೇಮ್ಸ್ ಚಾಂಪಿಯನ್‍ಷಿಪ್. ಆ ಕ್ರೀಡಾಕೂಟದ 4/400 ಮೀಟರ್ ಮಿಕ್ಸೆಡ್ ರಿಲೆ ಸ್ಪರ್ಧೆಯಲ್ಲಿ ಭಾರತದ ಸ್ಪರ್ಧಿಗಳು ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಭಾರತದ ಸ್ಪರ್ಧಿಗಳಿಂದ ಕೆಲವೇ ಕೆಲವು ಸೆಕೆಂಡುಗಳಲ್ಲಿ ಮೊದಲು ಗುರಿ ಮುಟ್ಟಿದ್ದ ಬಹರೈನ್ ಚಿನ್ನದ ಪದಕ ಗೆದ್ದುಕೊಂಡಿತ್ತು. ಅಂದ ಹಾಗೇ ಈ ಕ್ರೀಡಾಕೂಟ ಆಗಿ ಎರಡು ವರ್ಷವಾಯ್ತು. ಆದ್ರೆ ಆ ಎರಡು ವರ್ಷಗಳ ನಂತರ ಭಾರತಕ್ಕೆ ಬೆಳ್ಳಿ ಪದಕ ಬದಲು ಬಂಗಾರದ ಪದಕ ಸಿಕ್ಕಿದೆ.
ಅಂದ ಹಾಗೇ ಇಲ್ಲಿ ಆಗಿದ್ದು ಇಷ್ಟೇ.. ಬಹರೈನ್ ಪರ ಓಡಿದ್ದ ಒಬ್ಬ ಸ್ಪರ್ಧಿ ಉದ್ದೀಪನಾ ಮದ್ದು ಸೇವಿಸಿರುವುದು ಈಗ ಸಾಬೀತಾಗಿದೆ. ಹೀಗಾಗಿ ಬಹರೈನ್ ರಿಲೆ ತಂಡವನ್ನು ಅನರ್ಹಗೊಳಿಸಲಾಗಿದೆ. ಆದ್ರಿಂದ ಎರಡನೇ ಸ್ಥಾನದಲ್ಲಿದ್ದ ಭಾರತ ಮೊದಲ ಸ್ಥಾನಕ್ಕೇರಿದೆ.
ಬಹರೈನ್ ರಿಲೆ ತಂಡದ ಕೆಮಿ ಆಡಿಕೊಯಾ ಅವರು ಉದ್ದೀಪನಾ ದ್ರವ್ಯ ಸೇವನೆ ಮಾಡಿರುವುದು ಪತ್ತೆಯಾಗಿದೆ. ಅಥ್ಲೆಟಿಕ್ಸ್ ಇಂಟೆಗ್ರೆಟಿ ಯುನಿಟ್ ಕೆಮಿ ಆಡೆಕೊಯಾ ಅವರಿಗೆ ನಾಲ್ಕು ವರ್ಷಗಳ ನಿಷೇಧವನ್ನು ಹೇರಿದೆ.
ಇನ್ನು 4/400 ಮೀಟರ್ ಮಿಕ್ಸೆಡ್ ರಿಲೆ ಸ್ಪರ್ಧೆಯಲ್ಲಿ ಭಾರತದ ಪರ ಮಹಮ್ಮದ್ ಅನಾಸ್, ಪೂವಮ್ಮ, ಹಿಮದಾಸ್ ಮತ್ತು ಅರೋಕಿಯಾ ರಾಜೀವ್ ಸ್ಪರ್ಧಿಸಿದ್ದರು. ಭಾರತದ ಮಿಕ್ಸೆಡ್ ರಿಲೆ ತಂಡ 3ನಿಮಿಷ15:71 ಸೆಕೆಂಡುಗಳಲ್ಲಿ ಗುರಿ ತಲುಪಿದ್ರೆ, ಬಹರೈನ್ ಮಿಕ್ಸೆಡ್ ರಿಲೆ ತಂಡ 3 ನಿಮಿಷ 11:89 ಸೆಕೆಂಡುಗಳಲ್ಲಿ ಗುರಿ ಮುಟ್ಟಿತ್ತು.
ಇನ್ನೊಂದೆಡೆ ಮಹಿಳೆಯರ 400 ಮೀಟರ್ ಹರ್ಡಲ್ಸ್ ನಲ್ಲಿಯೂ ಭಾರತಕ್ಕೆ ಈಗ ಕಂಚಿನ ಪದಕ ಸಿಕ್ಕಿದೆ. ಬಹರೈನ್ ತಂಡದ ಪರ ಮಿಕ್ಸೆಡ್ ರಿಲೆ ತಂಡದಲ್ಲಿ ಓಡಿದ್ದ ಕೆಮಿ ಆಡಿಕೊಯಾ ಅವರು 400 ಮೀಟರ್ ಹರ್ಡಲ್ಸ್ ಅವರು ಚಿನ್ನ ಗೆದ್ದುಕೊಂಡಿದ್ರು. ಆದ್ರೆ ಈಗ ಅವರು ಅನರ್ಹಗೊಂಡಿದ್ದ ಕಾರಣ ನಾಲ್ಕನೇ ಸ್ಥಾನ ಪಡೆದಿದ್ದ ಭಾರತದ ಅನು ರಾಘವನ್ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಜಕಾರ್ತಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕ ಸಂಖ್ಯೆ 20ಕ್ಕೇರಿದೆ. 8 ಚಿನ್ನ, 9 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಗೆದ್ದುಕೊಂಡಂತಾಗಿದೆ.

Related posts

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

March 6, 2026
ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

March 6, 2026
Tags: #hima das2018 Asian Games4x400 mixed relayAnu RaghavanArokia RajivAthletics Federation of IndiaAthletics Integrity UnitBahrainBahrain Kemi Adekoyadope testindiaIndia’s 2018 Asian Games mixed relay medal upgraded to goldKemi AdekoyaMohammed AnasPoovammawomen’s 400m hurdles event
ShareTweetSendShare
Join us on:

Related Posts

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

ಶ್ರೀಲಂಕಾ ಬಳಿ ಇರಾನ್ ಯುದ್ಧನೌಕೆ ಮುಳುಗಿದ ಪ್ರಕರಣ: ಅಮೆರಿಕಗೆ ಇರಾನ್ ಕಠಿಣ ಎಚ್ಚರಿಕೆ

by Shwetha
March 6, 2026
0

ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆಯನ್ನು ಅಮೆರಿಕ ಮುಳುಗಿಸಿರುವ ಘಟನೆ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ಘಟನೆಯ ಬಗ್ಗೆ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,...

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

ನಿರುದ್ಯೋಗಿಗಳಿಗೆ ಬಂಪರ್ ಆಫರ್: ಪೋಸ್ಟ್ ಆಫೀಸ್ ಫ್ರಾಂಚೈಸಿ 2.0 ಮೂಲಕ ಸ್ವಂತ ಉದ್ಯೋಗ, ತಿಂಗಳಿಗೆ 80,000 ರೂಪಾಯಿಗಳ ಬೃಹತ್ ಆದಾಯ!

by Shwetha
March 6, 2026
0

ಸರ್ಕಾರಿ ಕೆಲಸ ಸಿಗಲಿಲ್ಲ ಎಂದು ಚಿಂತಿಸುತ್ತಿರುವ ಯುವಕ-ಯುವತಿಯರಿಗೆ, ಸಣ್ಣ ಉದ್ಯಮಿಗಳಿಗೆ ಹಾಗೂ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎಂದು ಕನಸು ಕಾಣುತ್ತಿರುವ ಪ್ರತಿಯೊಬ್ಬರಿಗೂ ಭಾರತೀಯ ಅಂಚೆ ಇಲಾಖೆಯು...

ಹುಬ್ಬಳ್ಳಿ: ಲವ್ ಜಿಹಾದ್ ಬಲೆಯಿಂದ ಪಾರಾದವರ ಕಣ್ಣೀರಿನ ಕಥೆ ಮತ್ತು ಎನ್ ಐ ಎ ತನಿಖೆಗೆ ಆಗ್ರಹಿಸಿದ ಸಂತ್ರಸ್ತರ ಕುಟುಂಬ

ಹುಬ್ಬಳ್ಳಿ: ಲವ್ ಜಿಹಾದ್ ಬಲೆಯಿಂದ ಪಾರಾದವರ ಕಣ್ಣೀರಿನ ಕಥೆ ಮತ್ತು ಎನ್ ಐ ಎ ತನಿಖೆಗೆ ಆಗ್ರಹಿಸಿದ ಸಂತ್ರಸ್ತರ ಕುಟುಂಬ

by Shwetha
March 6, 2026
0

ಇತ್ತೀಚೆಗೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ಹಾಗೂ ಸಿನಿಮಾಗಳ ಮೂಲಕವೂ ಸದ್ದು ಮಾಡುತ್ತಿರುವ ಲವ್ ಜಿಹಾದ್ ಪ್ರಕರಣಗಳು ಕರ್ನಾಟಕದಲ್ಲಿಯೂ ಆತಂಕ ಸೃಷ್ಟಿಸುತ್ತಿವೆ. ಹುಬ್ಬಳ್ಳಿಯಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ,...

ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿಯೇ ಇರಾನ್ ತಿರುಗೇಟು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಉಡೀಸ್, ಭುಗಿಲೆದ್ದ ಮಹಾಯುದ್ಧದ ಭೀತಿ!

ಅಮೆರಿಕ ಕೊಟ್ಟ ಏಟಿಗೆ 24 ಗಂಟೆಗಳಲ್ಲಿಯೇ ಇರಾನ್ ತಿರುಗೇಟು: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ತೈಲ ಟ್ಯಾಂಕರ್ ಉಡೀಸ್, ಭುಗಿಲೆದ್ದ ಮಹಾಯುದ್ಧದ ಭೀತಿ!

by Shwetha
March 6, 2026
0

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. ಹಿಂದೂ ಮಹಾಸಾಗರದಲ್ಲಿ ತನ್ನ ಯುದ್ಧನೌಕೆಯನ್ನು ಹೊಡೆದುರುಳಿಸಿದ ಅಮೆರಿಕದ...

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

ತೈಲ ಸಂಕಷ್ಟದ ನಡುವೆ ಭಾರತಕ್ಕೆ ರಷ್ಯಾ ನೆರವು

by Shwetha
March 6, 2026
0

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇರಾನ್–ಇಸ್ರೇಲ್ ಸೇನಾ ಸಂಘರ್ಷದ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಸಂಧಿ ಬಂದ್ ಅನ್ನು ಇರಾನ್ ಬಂದ್ ಮಾಡಿರುವುದರಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram