ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ : ಭಾರತಕ್ಕೆ ಮತ್ತೊಂದು ಪದಕ Amit Khatri saaksha tv
ಕೀನ್ಯಾ : ನೈರೋಬಿಯಲ್ಲಿ ನಡೆಯುತ್ತಿರುವ ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯರ ಪದಕಗಳ ಬೇಟೆ ಮುಂದುವರೆದಿದೆ.
ಇಂದು ನಡೆದ 10000 ಮೀಟರ್ ರೇಸ್ ವಾಕ್ ಸ್ಪರ್ಧೆಯಲ್ಲಿ ಭಾರತದ ಅಮಿತ್ ಕುಮಾರ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.
ನೈರೋಬಿಯಾದ ಕಸರನಿ ಕ್ರೀಡಾಂಗಣದಲ್ಲಿ ನಡೆದಿ ಈ ಸ್ಪರ್ಧೆಯಲ್ಲಿ ಅಮಿತ್ ಕುಮಾರ್ ಎರಡನೇ ಸ್ಥಾನ ಪಡೆದರು.
ಅವರು 42 ನಿಮಿಷ 17:94 ಸೆಕೆಂಡುಗಳಲ್ಲಿ ನಡಿಗೆ ಸ್ಪರ್ಧೆ ಪೂರ್ಣಗೊಳಿಸಿದರು.
ಇನ್ನು ಕೀನ್ಯಾದ ಹಿರಿಸ್ಟೋನ್ ವಾನ್ಯೋನ್ಯಿ ಚಿನ್ನದ ಪದಕ ಗೆದ್ದರು. ಪೌಲ್ ಮೆಕ್ ಗ್ರತ್ ಕಂಚಿಗೆ ಕೊರಳೊಡ್ಡಿದರು.
ಅಂದಹಾಗೆ ಈ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ದೊರಕಿರುವ ಎರಡನೇ ಪದಕ ಇದಾಗಿದೆ.









