ಹೊಸದಿಲ್ಲಿ, ಜುಲೈ11: ಭಾರತದ ಆರ್ಥಿಕತೆಯು ರಚನಾತ್ಮಕವಾಗಿ ಪ್ರಬಲವಾಗಿರುವುದರಿಂದ ಕಂಪನಿಗಳು ಮುಂದೆ ಬಂದು ಹೂಡಿಕೆ ಮಾಡುವಂತೆ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಶುಕ್ರವಾರ ಸಲಹೆ ನೀಡಿದರು.
ಹೂಡಿಕೆಯನ್ನು ಉತ್ತೇಜಿಸಲು ಸರ್ಕಾರ ಘೋಷಿಸಿದ ಕಾರ್ಪೊರೇಟ್ ತೆರಿಗೆ ದರದಲ್ಲಿ ಕಡಿತ ಸೇರಿದಂತೆ ಹಲವಾರು ಸುಧಾರಣೆಗಳ ಪಟ್ಟಿಯನ್ನು ಎತ್ತಿ ತೋರಿಸಿದ ಸಚಿವರು, ಸ್ಥಳೀಯ ಕಂಪನಿಗಳ ಹೂಡಿಕೆಯು ಭಾರತಕ್ಕೆ ಹಣವನ್ನು ಹಾಕಲು ವಿದೇಶಿ ಕಂಪನಿಗಳಲ್ಲಿ ವಿಶ್ವಾಸವನ್ನು ತುಂಬುತ್ತದೆ ಎಂದು ಹೇಳಿದರು.
ನಾವು ಕೆಲವು ದೇಶಗಳಲ್ಲಿ ಕಡಿಮೆ ಕಾರ್ಪೊರೇಟ್ ತೆರಿಗೆ ದರಗಳ ಬಗ್ಗೆ ಮಾತನಾಡುತ್ತಿದ್ದೆವು. ಕಳೆದ ವರ್ಷ ನಾವು ಅದನ್ನು ಮಾಡಿದ್ದು, ಐತಿಹಾಸಿಕ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 30 ರಿಂದ ಕೇವಲ 15 ಕ್ಕೆ ಇಳಿಸಿದ್ದೇವೆ ಎಂದು ಅವರು ಹೇಳಿದರು.
ವೆಬಿನಾರ್ ಒಂದರಲ್ಲಿ ಮಾತನಾಡುತ್ತಾ ಠಾಕೂರ್ ಆರ್ಥಿಕತೆಯನ್ನು ‘ಕಮಾಂಡ್ ಅಂಡ್ ಕಂಟ್ರೋಲ್’ ಮೋಡ್ನಿಂದ ಪರಿವರ್ತಿಸಿ ಅದನ್ನು ‘ಪ್ಲಗ್ ಅಂಡ್ ಪ್ಲೇ’ ಮೋಡ್ನತ್ತ ಕೊಂಡೊಯ್ದುವುದಾಗಿ ಹೇಳಿದರು. ಉದ್ಯಮವು ಬಂಡವಾಳ ರಚನೆಯಿಂದ ದೂರ ಸರಿದಿರುವ ಕಾರಣ ಕಳೆದ ಕೆಲವು ವರ್ಷಗಳಿಂದ ಖಾಸಗಿ ಹೂಡಿಕೆ ಮ್ಯೂಟ್ ಆಗಿದೆ ಎಂದ ಅವರು ಈ ಕಷ್ಟದ ಸಮಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು.