ಶೀಘ್ರದಲ್ಲೇ ಹಾರಲಿದೆ ಸ್ವದೇಶಿ ನಿರ್ಮಿತ ಮೊದಲ ವಿಮಾನ…..
ಭಾರತದಲ್ಲಿ ಮೊಟ್ಟ ಮೊದಲ ಭಾರಿಗೆ ಸ್ವದೇಶಿ ನಿರ್ಮಿತ ವಿಮಾನ ಶೀಘ್ರದಲ್ಲೇ ಭಾನಂಗಳದಲ್ಲಿ ಹಾರಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ‘ಹಿಂದೂಸ್ತಾನ್-228’ ಹೆಸರಿನ ಮೊಟ್ಟಮೊದಲ 2 ವಾಣಿಜ್ಯ ವಿಮಾನವನ್ನು ಅಭಿವೃದ್ಧಿಪಡಿಸಿದೆ.
ಈಗಾಗಲೇ ಪರಿಕ್ಷಾರ್ಥ ಸಂಚಾರವನ್ನ ಸಂಚಾರವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಗ್ರೌಂಡ್ ರನ್ ಮತ್ತು ಲೋ ಸ್ಪೀಡ್ ಟ್ಯಾಕ್ಸಿ (ವಿಮಾನವೊಂದು ಟೇಕ್‌ಆಫ್‌ಗೂ ಮುನ್ನ ತನ್ನ ಶಕ್ತಿಯನ್ನ ಬಳಸಿ ದೂರಕ್ಕೆ ಸಾಗುವುದು) ಪರೀಕ್ಷೆಯಲ್ಲಿ ಯಶಸ್ವಿಯಾಗಿವೆ.
ಈ ವಿಮಾನದ ಸಾಮರ್ಥ್ಯ ಮತ್ತು ವೈಶಿಷ್ಠಗಳೆಂದರೆ ಅತಿ ವೇಗವಾಗಿ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ ಆಗುವ ಸಾಮರ್ಥ್ಯ ಹೊಂದಿದೆ. ವಿಐಪಿ ಸಾರಿಗೆ , ಪ್ರಯಾಣಿಕರ ಸಾರಿಗೆ, ಏರ್ ಆಂಬ್ಯುಲೆನ್ಸ್ ಮತ್ತು ಪ್ಯಾರಾ ಜಂಪಿಂಗ್, ವೈಮಾನಿಕ ಕಣ್ಗಾವಲು, ಛಾಯಾಗ್ರಹಣ ಮತ್ತು ಸರಕು ಸಾಗಣೆಯಂತಹ ವಿವಿಧ ಉದ್ದೇಶಗಳ ಬಳಕೆಗೆ ಬಳಸಲ್ಪಡುವ ರೀತಿಯಲ್ಲಿ ನಿರ್ಮಿಸಲಾಗಿದೆ. ಈ ವಿಷಯದ ಕುರಿತು ಕೇಂದ್ರ ರಕ್ಷಣಾ ಇಲಾಖೆ ರಾಜ್ಯ ಖಾತೆ ಸಚಿವ ಅಜಯ್ ಭಟ್ ಸೋಮವಾರ ಸಂಸತ್ ಕಲಾಪದಲ್ಲಿ ತಿಳಿಸಿದರು.
ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ಈ ವಿಮಾನಗಳನ್ನು ಅರುಣಾಚಲ ಪ್ರದೇಶದಲ್ಲಿ ನಿಯೋಜಿಸಲು ನಿರ್ಧರಿಸಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ‍್ಯನಿರ್ವಹಿಸುವ ಅಲಯನ್ಸ್ ಏರ್‌ನೊಂದಿಗೆ ಎಚ್‌ಎಎಲ್ ಭೋಗ್ಯಕ್ಕೆ (Lease) ನೀಡುವ ಒಪ್ಪಂದ ಮಾಡಿಕೊಂಡಿದೆ.








