ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ಜೂನ್ 2-6ರ ನಡುವೆ ನಡೆಯಲಿರುವ 2020 ರ ಯುಎನ್ ಸಾಗರ ಸಮ್ಮೇಳನದಲ್ಲಿ ಭಾರತ ಭಾಗವಹಿಸಲಿದೆ ಎಂದು ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೂಸಾ ಹೇಳಿದ್ದಾರೆ.
ಯುಎನ್ ಸೆಕ್ಯುರಿಟಿ ಕೌನ್ಸಿಲ್ ನ ಶಾಶ್ವತ ಸದಸ್ಯತ್ವಕ್ಕಾಗಿ ಭಾರತದ ಪ್ರಯತ್ನವನ್ನು ತಮ್ಮ ದೇಶವು ಸಂಪೂರ್ಣವಾಗಿ ಬೆಂಬಲಿಸಿದೆ ಎಂದು ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೂಸಾ ಶನಿವಾರ ಹೇಳಿದ್ದಾರೆ.
ಅವರು ಎರಡು ದಿನಗಳ ಗೋವಾ ಪ್ರವಾಸದಲ್ಲಿದ್ದು, ಯುಎನ್ ಸೆಕ್ಯುರಿಟಿ ಕೌನ್ಸಿಲ್ ನ ಖಾಯಂ ಸದಸ್ಯರಾಗಲು ಭಾರತವು ಪೋರ್ಚುಗಲ್ ನ ಸಂಪೂರ್ಣ ಬೆಂಬಲವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ಜೂನ್ 2-6ರ ನಡುವೆ ನಡೆಯಲಿರುವ 2020 ರ ಯುಎನ್ ಸಾಗರ ಸಮ್ಮೇಳನದಲ್ಲಿ ಭಾರತ ಭಾಗವಹಿಸಲಿದೆ ಎಂದು ಸೂಸಾ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಅವರೊಂದಿಗಿನ ಸಭೆಗಳು ಫಲಪ್ರದವಾಗಿದ್ದು, ನಾವು ಭಾರತದಲ್ಲಿ ಪೋರ್ಚುಗೀಸ್ ಹೂಡಿಕೆ ಮತ್ತು ಪೋರ್ಚುಗಲ್ ನಲ್ಲಿ ಭಾರತೀಯ ಹೂಡಿಕೆಗಾಗಿ ಯೋಜನೆಗಳನ್ನು ಚರ್ಚಿಸಿದ್ದೇವೆ ಎಂದು ಅವರು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ಉಭಯ ದೇಶಗಳು ಆರ್ಥಿಕತೆ, ತಂತ್ರಜ್ಞಾನ, ಸಂಸ್ಕೃತಿ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಸಹಕಾರವನ್ನು ಯೋಜಿಸಿವೆ ಎಂದು ಸೂಸಾ ಹೇಳಿದರು.








