ಜಿನೀವಾ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಎಲ್ಲಾ ರಾಷ್ಟ್ರಗಳ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಭಾರತದ ತ್ರಿವರ್ಣ ಧ್ವಜ ಸೇರಿದಂತೆ ಅನ್ಯ ದೇಶದ ಧ್ವಜಗಳನ್ನೂ ಸ್ವಿಜರ್ ಲ್ಯಾಂಡ್ ನ ಆಲ್ಪ್ಸ್ ಮ್ಯಾಟರ್ ಹಾರ್ನ್ ಪರ್ವತದ ಮೇಲೆ ಲೈಟ್ ಗಳ ಸಹಾಯದಿಂದ ಮೂಡಿಸಲಾಯಿತು.
ಸ್ವಿಸ್‌ನ ಖ್ಯಾತ ಬೆಳಕಿನ(ಲೈಟ್) ಕಲಾವಿದ ಗೆರ್ರಿ ಹಾಫ್‌ಸ್ಟೆಟರ್ ಎಂಬುವವರು 14,690 ಅಡಿ ಎತ್ತರದ ಪರ್ವತದ ಮೇಲೆ ಹಲವು ದೇಶಗಳ ಧ್ವಜಗಳನ್ನು ಮೂಡಿಸಿದ್ದಾರೆ. ನಿನ್ನೆ ರಾತ್ರಿ ಸ್ವಿಜರ್ ಲ್ಯಾಂಡ್ ಮತ್ತು ಇಟಲಿ ಗಡಿಯ ಮಧ್ಯೆ ಇರುವ ಈ ಪರ್ವತದ ಮೇಲೆ ಮೂಡಿಬಂದ ಭಾರತದ ತ್ರಿವರ್ಣ ಧ್ವಜವನ್ನು ನೋಡಿದ ಭಾರತೀಯರು ಫುಲ್ ಥ್ರಿಲ್ ಆಗಿದ್ದರು.
The world is fighting COVID-19 together.
Humanity will surely overcome this pandemic. https://t.co/7Kgwp1TU6A
— Narendra Modi (@narendramodi) April 18, 2020
ಪ್ರಧಾನಿ ಮೋದಿ ಮೆಚ್ಚುಗೆ..!
ಇನ್ನು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಗತ್ತು ಒಗ್ಗಟ್ಟಿನಿಂದ ಈ ಕೊರೊನಾ ವಿರುದ್ಧ ಹೋರಾಡುತ್ತಿದೆ. ಈ ಸಾಂಕ್ರಾಮಿಕ ರೋಗದಿಂದ ವಿಶ್ವ ಬಹುಬೇಗನೇ ಹೊರಬರುತ್ತೆ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೇ ಇದೇ ವೇಳೆ ಸ್ವಿಸ್ ರಾಷ್ಟ್ರೀಯ ಬಣ್ಣಗಳಾದ ಬಿಳಿ ಮತ್ತು ಕೆಂಪಿನಲ್ಲಿ ಭರವಸೆ, ಒಗ್ಗಟ್ಟು ಮತ್ತು ಮನೆಯಲ್ಲೇ ಇರಿ ಎಂಬ ಪದಗಳನ್ನು ಕೂಡ ಪ್ರದರ್ಶಿಸಲಾಯಿತು. ಬೆಳಕು ಅಂದ್ರೆ ಭರವಸೆ. ಆದ್ದರಿಂದ ನಾವು ಇಂತಹ ತುರ್ತು ಪರಿಸ್ಥಿತಿಯಲ್ಲಿ ಬೆಳಕಿನೊಂದಿಗೆ ಸಂದೇಶ ಸಾರಿದರೆ ಅದು ಎಲ್ಲರಿಗೂ ತಲುಪುತ್ತದೆ ಅನ್ನೋದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.








