ಇಂಡಿಗೋ ವಿಮಾನಗಳ ರದ್ದತಿ ಮತ್ತು ಹಾರಾಟ ವ್ಯತ್ಯಯದಿಂದ ದೇಶದ ಅನೇಕ ನಗರಗಳಲ್ಲಿ ಗೊಂದಲ ಉಂಟಾಗಿದ್ದು, ಇದರ ನೇರ ಪರಿಣಾಮ ಬೆಂಗಳೂರು ನಗರದ ಪಂಚತಾರಾ ಹೋಟೆಲ್‌ಗಳ ಮೇಲೆ ಬಿದ್ದಿದೆ. ಸಾಮಾನ್ಯವಾಗಿ ದಿನಕ್ಕೆ ₹10,000 ರಿಂದ ₹15,000ರ ನಡುವೆ ಇರುವ ಸ್ಟಾರ್ ಹೋಟೆಲ್ ದರಗಳು, ಈಗ ಶೇ. 40 ರಿಂದ 60 ರಷ್ಟು ಹೆಚ್ಚಾಗಿ ₹40,000–₹50,000 ದರವರೆಗೆ ಏರಿಕೆ ಕಂಡಿವೆ.
ಹಠಾತ್ ಆಗಿ ಸಾವಿರಾರು ಪ್ರಯಾಣಿಕರ ಪ್ರಯಾಣ ರದ್ದಾದ ಕಾರಣ, ಅಪಾರ ಸಂಖ್ಯೆಯಲ್ಲಿ ಜನರು ಏರ್ಪೋರ್ಟ್ ಸಮೀಪ ಅಥವಾ ನಗರದಲ್ಲಿ ಇರುವ ಹೋಟೆಲ್‌ಗಳಲ್ಲಿ ವಾಸ್ತವ್ಯಕ್ಕೆ ತೊಡಗಿದ್ದಾರೆ. ಬೇಡಿಕೆ ತೀವ್ರಗೊಂಡ ಪರಿಣಾಮ, ಹೋಟೆಲ್‌ಗಳು ತಮ್ಮ ರೂಮ್ ದರಗಳನ್ನು ತಕ್ಷಣವೇ ಹೆಚ್ಚಿಸಿವೆ.
ಪ್ರವಾಸಿಗರಲ್ಲದೆ ವ್ಯಾಪಾರ, ಮೀಟಿಂಗ್, ಸಮ್ಮೇಳನಗಳಿಗೆ ಬಂದಿದ್ದವರೂ ಸಹ ಹೋಟೆಲ್ ವಾಸ್ತವ್ಯ ನೋಡಬೇಕಾಗಿದ್ದು, ಹೋಟೆಲ್‌ಗಳಲ್ಲಿ ರೂಮ್ ಲಭ್ಯತೆ ಕಡಿಮೆ ಆಗಿದೆ. ಇದರಿಂದಾಗಿ ಬುಕ್ಕಿಂಗ್ ದರಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆತಿಥ್ಯ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂಡಿಗೋ ವಿಮಾನ ಬಿಕ್ಕಟ್ಟು ಪರಿಹಾರಗೊಳ್ಳುವವರೆಗೂ, ಬೆಂಗಳೂರಿನ ಹೋಟೆಲ್‌ಗಳ ಈ ದರ ಏರಿಕೆ ಮುಂದುವರಿಯುವ ಸಾಧ್ಯತೆ ಇರುವುದರಿಂದ, ಪ್ರವಾಸಿಗರು ಮತ್ತು ವ್ಯವಹಾರಿಕ ಪ್ರಯಾಣಿಕರು ತಾತ್ಕಾಲಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಗರದ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಬೇಡಿಕೆ ಏರಿಕೆಯಾದರೂ, ವಾಸ್ತವ್ಯ ವೆಚ್ಚದ ಬಿಸಿ ಇದೀಗ ಸಾಮಾನ್ಯ ಪ್ರಯಾಣಿಕರಿಗೆ ತಟ್ಟಿದೆ.








