ಇಂಡಿಗೋ ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ ಗೌರವ್ ನೇಗಿ ನೇಮಕ
ಇಂಟರ್‌ಗ್ಲೋಬ್ ಏವಿಯೇಷನ್ ಲಿಮಿಟೆಡ್ (ಇಂಡಿಗೋ) ಗೌರವ್ ನೇಗಿ ಅವರನ್ನು ಹೊಸ ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ನೇಮಕ ಮಾಡಿದೆ. ಅವರ ನೇಮಕಾತಿಯು 1 ಏಪ್ರಿಲ್ 2022 ರಿಂದ ಜಾರಿಗೆ ಬರಲಿದೆ. ಸಿಎಫ್‌ಒ ಜಿತೇನ್ ಚೋಪ್ರಾ ಅವರು ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಒಂದು ದಿನದ ನಂತರ ನೇಗಿ ಅವರ ನೇಮಕಾತಿ ನಡೆದಿದೆ. ಇಂಟರ್ ಗ್ಲೋಬ್ ಕರೆದಿದ್ದ ಸಭೆಯಲ್ಲಿ ಕಂಪನಿಯ ಆಡಳಿತ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿದೆ.
ಕಂಪನಿಯ ನಿರ್ದೇಶಕರ ಮಂಡಳಿಯು ಇಂದು ಅಂದರೆ ಮಾರ್ಚ್ 29, 2022 ರಂದು ನಡೆದ ಸಭೆಯಲ್ಲಿ ಗೌರವ್ ನೇಗಿ ಅವರನ್ನು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿ ನೇಮಿಸಲು ಅನುಮೋದನೆ ನೀಡಿದೆ ಎಂದು ಕಂಪನಿ ತಿಳಿಸಿದೆ. ಗೌರವ್ ನೇಗಿ ಅವರು ಹಣಕಾಸು, ಕಾರ್ಪೊರೇಟ್ ಆಡಳಿತ ಮತ್ತು ವ್ಯಾಪಾರ ಕಾರ್ಯಾಚರಣೆಗಳ ಕ್ಷೇತ್ರಗಳಲ್ಲಿ ಎರಡು ದಶಕಗಳ ಅನುಭವವನ್ನು ಹೊಂದಿದ್ದಾರೆ. ಅವರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ಸರ್ಟಿಫೈಡ್ ಸಿಕ್ಸ್ ಸಿಗ್ಮಾ ಬ್ಲಾಕ್‌ಬೆಲ್ಟ್ ಆಗಿದ್ದಾರೆ ಮತ್ತು ವಿವಿಧ ಉದ್ಯಮಗಳಲ್ಲಿ ಹಿರಿಯ ನಿರ್ವಹಣಾ ಜವಾಬ್ದಾರಿಗಳನ್ನು ಹೊಂದಿದ್ದಾರೆ ಮತ್ತು ಹಲವಾರು ದೇಶಗಳಲ್ಲಿ ಕೆಲಸ ಮಾಡಿದ್ದಾರೆ.