Indira Canteen : ಇನ್ಮುಂದೆ ಇಂದಿರಾ ಕ್ಯಾಂಟೀನ್ ಜವಾಬ್ದಾರಿ BBMP ಆರೋಗ್ಯ ವಿಭಾಗದ್ದು..!!
ಬೆಂಗಳೂರು : ಬೆಂಗಳೂರಿನಲ್ಲಿನ ಇಂದಿರಾ ಕ್ಯಾಂಟೀನ್ಗಳ (Indira Canteen ) ಜವಾಬ್ದಾರಿಯನ್ನು ಇದೀಗ ಇನ್ಮುಂದೆ BBMP ಆರೋಗ್ಯ ವಿಭಾಗ ಹೊತ್ತಿದ್ದು, ಅದರ ನಿರ್ದೇಶನದಂತೆ ಕ್ಯಾಂಟೀನ್ ನಡೆಯಲಿದೆ.
ಇತ್ತೀಚೆಗಷ್ಟೇ ಇಂದಿರಾ ಕ್ಯಾಂಟೀನ್ ಗಳು ಬಂದ್ ಆಗುತ್ತವೆ ಎಂಬ ವದಂತಿ ಹಬ್ಬಿತ್ತು. ಇದೀಗ ೀ ವದಂತಿಗೆ ಬ್ರೇಕ್ ಬಿದ್ದಿದೆ..
ಈ ಮೊದಲು ಬಿಬಿಎಂಪಿ ಹಣಕಾಸು ವಿಭಾಗ ಇಂದಿರಾ ಕ್ಯಾಂಟೀನ್ ಗಳ ಮೇಲ್ವಿಚಾರಣೆ ನಡೆಸುತ್ತಿತ್ತು. ಅಷ್ಟೇ ಅಲ್ಲದೇ ಆಹಾರ ಪೂರೈಕೆ ಹಾಗೂ ವಿತರಣೆ ಸರಿಯಾಗಿ ಆಗುತ್ತಿಲ್ಲ ಎಂಬ ಸಾಕಷ್ಟುಗಳು ದೂರುಗಳು ಬಂದಿದ್ದವು
ಆರೋಗ್ಯ ವಿಭಾಗಕ್ಕೆ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಜವಾಬ್ದಾರಿಯನ್ನು ನೀಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ, ಇಂದಿರಾ ಕ್ಯಾಂಟೀನ್ಗಳ ನಿರ್ವಹಣೆಗೆ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಿದ್ದಾರೆ.