ಮುಖ್ಪಾರಿ ಶಿಖರದಲ್ಲಿ ಶೂಟಿಂಗ್ ವ್ಯಾಪ್ತಿಯಲ್ಲಿ ಕಾವಲು ಕಾಯುತ್ತಿರುವ ಭಾರತ-ಚೀನಾ ಪಡೆಗಳು
ಲಡಾಖ್, ಸೆಪ್ಟೆಂಬರ್14: ವಿದೇಶಾಂಗ ಸಚಿವ ಜೈಶಂಕರ್, ಚೀನಾದ ವಿದೇಶಾಂಗ ಸಚಿವರೊಡನೆ ಮಾಸ್ಕೋದಲ್ಲಿ ನಡೆಸಿದ ಸಂವಾದದ ನಂತರವೂ ಭಾರತ-ಚೀನಾ ಗಡಿಯಲ್ಲಿನ ಉದ್ವಿಗ್ನತೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಲಡಾಖ್‌ನ ರೆಜಾಗ್ ಲಾ ಬಳಿಯ ಮುಖ್ಪಾರಿ ಶಿಖರದಲ್ಲಿ ಶೂಟಿಂಗ್ ವ್ಯಾಪ್ತಿಯ ಅಂತರದಲ್ಲಿ ಭಾರತ-ಚೀನಾ ಪಡೆಗಳು ಪರಸ್ಪರ ಕಾವಲು ಕಾಯುವುದನ್ನು ಮುಂದುವರಿಸಿದೆ. ಅದೇ ಸಮಯದಲ್ಲಿ, ಚೀನಾ ಪೂರ್ವ ಲಡಾಖ್‌ನ ಪಂಗೊಂಗ್ ತ್ಸೊದ ದಕ್ಷಿಣ ಭಾಗದಲ್ಲಿರುವ ಸ್ಪ್ಯಾಂಗೂರ್ ಗ್ಯಾಪ್‌ನಲ್ಲಿ ಭಾರತೀಯ ಸೇನೆಯ ನಿಯೋಜನೆಯ ರೈಫಲ್ ವ್ಯಾಪ್ತಿಯಲ್ಲಿ ಸಾವಿರಾರು ಸೈನಿಕರು, ಟ್ಯಾಂಕ್‌ಗಳು ಮತ್ತು ಹೊವಿಟ್ಜರ್‌ಗಳನ್ನು ಸಜ್ಜುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಭಾರತೀಯ ಸೈನಿಕರು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಚುಶುಲ್ ಬಳಿಯ ದಕ್ಷಿಣದ ದಂಡೆಯ ಪಾಂಗೊಂಗ್ ತ್ಸೊದ ರಿಡ್ಜ್ ಮಾರ್ಗದಲ್ಲಿ ಅತ್ಯಂತ ಎತ್ತರದ ನೆಲೆಯನ್ನು ವಶಪಡಿಸಿಕೊಂಡ ನಂತರ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಗುರುಂಗ್ ಹಿಲ್ ಮತ್ತು ಮಾಗರ್ ಬೆಟ್ಟದ ನಡುವಿನ ಸ್ಪ್ಯಾಂಗ್ಗುರ್ ಗ್ಯಾಪ್ನಲ್ಲಿ ಪ್ರಚೋದನಕಾರಿ ಮಿಲಿಟರಿ ನಿಯೋಜನೆಯನ್ನು ಮಾಡಿದೆ. ಇದಲ್ಲದೆ, ಗಡಿಯನ್ನು ಕ್ರೋಢಿಕರಿಸಲು ಮತ್ತು ಟಿಬೆಟ್ ಪ್ರದೇಶವನ್ನು ಸ್ಥಿರಗೊಳಿಸಲು ಚೀನಾ ತನ್ನ ಮಿಲಿಟರಿ ಪಡೆಗಳನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಎತ್ತರದ ನೆಲೆಗಳ ಮೇಲೆ ಕಾವಲು ಕಾಯುತ್ತಿರುವ ಭಾರತೀಯ ಸೇನಾ ಸೈನಿಕರನ್ನು ಹೊರಹಾಕಲು ಚೀನಾ ಪ್ರಯತ್ನಿಸುತ್ತಿದೆ.
ಚೀನಾದ ಪಿಎಲ್‌ಎ ಸೈನ್ಯ ಮತ್ತು ಬಂದೂಕುಗಳ ಕ್ರೋಢಿ ಕರಣವನ್ನು ನೋಡಿದ ಭಾರತೀಯ ಸೇನೆಯೂ ಸ್ಪ್ಯಾಂಗ್‌ಗೂರ್ ಗ್ಯಾಪ್‌ನಲ್ಲಿ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ನಿಯೋಜನೆ ಮಾಡಿದ್ದು, ಎರಡೂ ದೇಶಗಳ ಸೈನ್ಯ ಮತ್ತು ಬಂದೂಕುಗಳು ಶೂಟಿಂಗ್ ವ್ಯಾಪ್ತಿಯಲ್ಲಿವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.








