ಇಂಡೋನೇಷ್ಯಾ: ಪಶ್ಚಿಮ ಇಂಡೋನೇಷ್ಯಾದಲ್ಲಿ ಎರಡು ಪ್ರಬಲ ಭೂಕಂಪನಗಳು ಸಂಭವಿಸಿದ್ದು, ಜನರು ಆತಂಕಕ್ಕೆ ಒಳಗಾಗಿದ್ದಾರೆ. ರಿಕ್ಟರ್ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎನ್ನಲಾಗಿದೆ.
ಮೊದಲ ಭೂಕಂಪನದ 6 ನಿಮಿಷಗಳ ನಂತರ 6.9 ತೀವ್ರತೆಯಲ್ಲಿ ಮತ್ತೊಂದು ಬಾರಿ ಭೂಮಿ ಕಂಪಿಸಿದೆ. ಅಮೆರಿಕ ಭೂ ವೈಜ್ಞಾನಿಕ ಸಮೀಕ್ಷೆ ಪ್ರಕಾರ ಸಮುದ್ರದ ಕೆಳಗೆ 10 ಕಿಲೋ ಮೀಟರ್ ಆಳದಲ್ಲಿ 6.8 ತೀವ್ರತೆಯ ಭೂಕಂಪಪಿಸಿದೆ. ಸುಮಾತ್ರಾ ದ್ವೀಪದ ಬೆಂಗ್ಕುಲು ಪ್ರಾಂತ್ಯದಲ್ಲಿ ಭೂಕಂಪನವಾಗಿದೆ. ಇತ್ತ ದ್ವೀಪದ ಹಲವಾರು ಪ್ರಾಂತ್ಯಗಳಲ್ಲಿಯೂ ಭೂಕಂಪನದ ಅನುಭವವಾಗಿದೆ.









