Indonesia Mosque : ಬೆಂಕಿ ಅವಘಡದಲ್ಲಿ ಕುಸಿದು ಬಿದ್ದ ಮಸೀದಿ ಗುಮ್ಮಟ…
ಭಾರಿ ಅಗ್ನಿ ಅವಘಡದಿಂದಾಗಿ ಮಸೀದಿಯ ಬೃಹತ್ ಗೊಮ್ಮಟ ಮುರಿದುಬಿದ್ದಿರುವ ಘಟನೆ ಇಂಡೋನ್ಯಾಷದ ಜರ್ಕಾತದಲ್ಲಿ ನಡೆದಿದೆ.
ಬುಧವಾರ ಅಕ್ಟೋಬರ್ 19 ರಂದು ಉತ್ತರಾ ಜರ್ಕಾತದ ಜಾಮಿ ಮಸೀದಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇಸ್ಲಾಮಿಕ್ ಸೆಂಟರ್ ಗೆ ಸೇರಿದ ಕಟ್ಟಡದ ಸಂಕೀರ್ಣದಲ್ಲಿಇದು ನಲೆಗೊಂಡಿತ್ತು. ಇದು ಇಸ್ಲಾಮಿಕ್ ಅಧ್ಯಯನಗಳು ಮತ್ತು ಅಭಿವೃದ್ಧಿಯ ಕುರಿತು ಚಿಂತಕರ ಚಾವಡಿಯಾಗಿದೆ.
https://twitter.com/i/status/1582836611729231873
ಅವಘಡದಲ್ಲಿ ಯಾರು ಗಾಯಗೊಂಡಿಲ್ಲ ಎಂದು ಸ್ಥಳಿಯ ಮಾಧ್ಯಮಗಳು ವರದಿ ಮಾಡಿವೆ. ಡೋಮ್ ಕಾಂಪ್ಲೆಕ್ಸ್ ನಲ್ಲಿ ನವೀಕರಣ ನಡೆಯುತ್ತಿದ್ದಾಗ ಘಟನೆ ಜರುಗಿದೆ ಎನ್ನಲಾಗಿದೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಕಿಯ ತೀವ್ರತೆಗೆ ಗುಮ್ಮಟವೇ ಕುಸಿದುಬಿದ್ದಿದೆ.
https://twitter.com/i/status/1582816475789697024
ಘಟನೆಯ ಕಾರಣಕ್ಕಾಗಿ ತನಿಖೆ ನಡೆಸಲಾಗುತ್ತಿದೆ. ಮಸೀದಿಯ ದುರಸ್ತಿ ಕೆಲಸ ಮಾಡುತ್ತಿದ್ದ ಗುತ್ತಿಗೆದಾರ ಕಂಪನಿಯ ನಾಲ್ವರು ನೌಕರರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.








