ಇಂಡೋನೇಷ್ಯಾ ಓಪನ್ ಟೂರ್ನಿ | ಪ್ರಶಸ್ತಿಯತ್ತ ಸಿಂಧು ಚಿತ್ತ
ಎರಡು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಭಾರತದ ಪಿ.ವಿ ಸಿಂಧು ಅವರು ಇಂಡೋನೇಷ್ಯಾ ಮಾಸ್ಟರ್ಸ್ ಸೂಪರ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಈ ಪಂದ್ಯವಾಳಿಯಲ್ಲಿ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೈಹ್ವಾಲ್ ಹಾಗೂ ಸಮೀರ್ ವರ್ಮಾ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಸಿಂಧು ಅವರು ರಿಯೋದಲ್ಲಿ ಬೆಳ್ಳಿ, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚು ಪಡೆದ ಬಳಿಕ ಡೆನ್ಮಾರ್ಕ್ ಹಾಗೂ ಫ್ರಾನ್ಸ್ ಟೂರ್ನಿಯಲ್ಲಿ ಪೋಡಿಯಂ ಏರುವಲ್ಲಿ ವಿಫಲರಾಗಿದ್ದಾರೆ. 2019ರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಸಿಂಧು ಕೊನೆಯ ಬಾರಿಗೆ ಪದಕದ ನಗೆ ಬೀರಿದ್ದರು.
ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ಮತ್ತು ಕಳೆದ ಎರಡು ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಸಮೀರ್, ತಮ್ಮ ಗಾಯಗಳಿಂದ ಚೇತರಿಸಿಕೊಳ್ಳಲು ಇಂಡೋನೇಷ್ಯಾ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಸೈನಾ ಊಬರ್ ಕಪ್ ಬ್ಯಾಡ್ಮಿಂಟನ್ ವೇಳೆ ಗಾಯಕ್ಕೆ ತುತ್ತಾಗಿದ್ದರು.
ಹೈಲೋ ಓಪನ್ನ ಸೆಮಿಫೈನಲ್ಗೆ ತಲುಪಿದ್ದ ಕಿಡಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಮೇಲೆ ಈ ಎಲ್ಲರ ಕಣ್ಣುಗಳು ನೆಟ್ಟಿವೆ.
ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕ್ಕಿ ರೆಡ್ಡಿ ಅವರು ಡೆನ್ಮಾರ್ಕ್ನ ಅಲೆಕ್ಸಾಂಡ್ರಾ ಬೋಜೆ ಮತ್ತು ಮೆಟ್ಟೆ ಪೌಲ್ಸೆನ್ ಅವರನ್ನು ಎದುರಿಸಲಿದ್ದಾರೆ.
ಮಿಶ್ರ ಡಬಲ್ಸ್ ಹಾಗೂ ಪುರಷರ ಡಬಲ್ಸ್ ನಲ್ಲಿ ಭಾರತದ ಆಟಗಾರರು ಕಣಕ್ಕೆ ಇಳಿಯದಲ್ಲಿದ್ದಾರೆ.