ಜ್ವಾಲಾಮುಖಿ ಸ್ಫೋಟಕ್ಕೆ 13 ಮಂದಿ ಸಾವು volcanic saaksha tv
ಜಕಾರ್ತ : ಇಂಡೋನೇಷ್ಯಾದ ಜಾವಾ ಪ್ರಾಂತ್ಯದ ಮೌಂಟ್ ಸಿಮೇರುವಿನಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಪರಿಣಾಮ 13 ಮಂದಿ ಮೃತಪಟ್ಟಿದ್ದು, 90ಕ್ಕು ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸಿಮೇರುವಿ, ಜಾವಾ ದ್ವೀಪದ ಅತಿ ಎತ್ತರದ ಪರ್ವತವಾಗಿದೆ. ಇಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿರುವುದರಿಂದ ಹತ್ತಿರದ ಹಳ್ಳಿಗಳಲ್ಲಿ ಲಾವಾ ಹರಿದಿದೆ.
ಪರಿಣಾಮವಾಗಿ ಸಿಮೇರು ಸಮೀಪದ ಲುಮಾಜಾಂಗ್ ಕೆರೊಬೊಕನ್ ಗ್ರಾಮದಲ್ಲಿ 13 ಮಂದಿ ಮೃತಪಟ್ಟಿದ್ದು, ಅವರಲ್ಲಿ ಇಬ್ಬರನ್ನು ಗುರುತಿಸಲಾಗಿದೆ.
ಇನ್ನು ಈ ಘಟನೆಯಲ್ಲಿ ಇಬ್ಬರು ಗರ್ಭಿಣಿಯರು ಸೇರಿದಂತೆ 92 ಮಂದಿ ಗಾಯಗೊಂಡಿದ್ದಾರೆ.
ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗುತ್ತಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ.









