ಕಾಲೇಜಿಗೆ ಚಕ್ಕರ್ ಹೊಡೆದು ವಿಷ ಸೇವಿಸಿದ 3 ಬಾಲಕೀಯರು
ಕಾಲೇಜಿಗೆ ಚಕ್ಕರ್ ಹಾಕಿ ಮಧ್ಯಪ್ರದೇಶದ ಸೆಹೋರ್‌ನಿಂದ ಇಂದೋರ್‌ಗೆ ಬಂದಿದ್ದ ಮೂವರು ಅಪ್ರಾಪ್ತ ಬಾಲಕಿಯರು ವಿಷ ಸೇವಿರುವ ಘಟನೆ ನಡೆದಿದೆ.
ಮೂವರು ಬಾಲಕಿಯರನ್ನ ಚಿಕಿತ್ಸೆಗಾಗಿ ಎಂವೈ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿನ್ನೆ ಸಂಜೆ ಇಬ್ಬರು ಬಾಲಕಿಯರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಪ್ರಕಾರ, ಮೂವರ ಹೆಸರರನ್ನ ಪೂಜಾ, ಆರತಿ ಮತ್ತು ಪಾಲಕ್ ಎಂದು ಗುರುತಿಸಲಾಗಿದೆ. ಬಾಲಕೀಯರು ವಿಷ ಸೇವಿಸಿರುವ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಇದಾದ ಬಳಿಕ ಆಸ್ಪತ್ರೆಗೆ ಆಗಮಿಸಿದ ಪೊಲೀಸರು ವಿಷ ಸೇವನೆಗೆ ಕಾರಣ ತಿಳಿದುಕೊಂಡಿದ್ದಾರೆ.
ಕೌಟುಂಬಿಕ ಕಲಹದಿಂದ ಹದಿಹರೆಯದ ಬಾಲಕೀಯರು ವಿಷ ಸೇವಿಸಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಯುವಕನ ಜೊತೆಗಿನ ಸ್ನೇಹದ ವಿಚಾರದಲ್ಲಿ ಒಬ್ಬ ಬಾಲಕಿ ವಿಷ ಸೇವಿಸಿದ್ದಾಳೆ.
ಪ್ರಾದೇಶಿಕ ಉದ್ಯಾನವನದಲ್ಲಿ ಮೂವರು ವಿಷ ಸೇವಿಸಿದ್ದಾರೆ ಎಂದು ಮೊದಲು ವರದಿಯಾಗಿತ್ತು. ಆದರೆ ಉದ್ಯಾನವನದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಪಾರ್ಕ್ ಸಿಬ್ಬಂದಿ ಹೇಳಿದ್ದಾರೆ. ಪೊಲೀಸರು ಬಾಲಕಿಯ ಕುಟುಂಬ ಸದಸ್ಯರಿಗೆ ವಿಷಯ ತಿಳಿಸಿದ್ದಾರೆ. ಸಂಜೆ ತಡರಾತ್ರಿ ಇಬ್ಬರು ಬಾಲಕಿಯರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
Indore: 3 Girls Consume Poison Together After Bunking School; 2 Dead








