ಮೂರು ಬಿಟ್ಟವರ ಜೊತೆ ಏನು ಮಾತನಾಡೋದು : ದಾಸನ ವಿರುದ್ಧ ಇಂದ್ರಜಿತ್ ಕಿಡಿ
ಬೆಂಗಳೂರು : ಅವರೇ ತಮ್ಮನ್ನು ಮೂರು ಬಿಟ್ಟವರು ಅಂತ ಹೇಳಿಕೊಂಡಿದ್ದಾರೆ. ಹಾಗಾಗಿ ಮೂರು ಬಿಟ್ಟವರ ಜೊತೆ ಏನು ಮಾತನಾಡೋದು. ಕೊಚ್ಚೆಗೆ ಕಲ್ಲು ಎಸೆಯೋಕೆ ಇಷ್ಟ ಇಲ್ಲ ಎಂದು ನಟ ದರ್ಶನ್ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಧ್ಯಮಗಳ ವಿರುದ್ಧ ಕಿಡಿಕಾರಿದ ಅವರು, ನಾನು ಕೊಚ್ಚೆಗೆ ಕಲ್ಲು ಹಾಕಲ್ಲ. ನಟ ದರ್ಶನ್ ಮಾನಸಿಕವಾಗಿ ವಿಚಲಿತರಾಗಿದ್ದು, ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದು. ನಾನು ಲಾಯರ್ ಹತ್ತಿರ ಹೋಗಿ ಕಾನೂನು ಮುಖಾಂತರ ಎಲ್ಲವನ್ನು ಎದುರಿಸುತ್ತೇನೆ.
ಈ ಎಲ್ಲ ಬೆಳವಣಿಗೆಯಿಂದ ನಾನೇನು ವಿಚಲಿತನಾಗಿಲ್ಲ. ಓರ್ವ ಬಡವ ಮತ್ತು ಸಾಮಾನ್ಯ ವ್ಯಕ್ತಿಯ ಮೇಲೆ ಹಲ್ಲೆ ಆಗಿರೋದು ಮುಂದಿದ್ದೇನೆಯೇ ಹೊರತು ಬೇರಾವ ಉದ್ದೇಶಕ್ಕೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದುವರೆದು ದರ್ಶನ ನಡೆ ಬಗ್ಗೆ ವ್ಯಂಗ್ಯವಾಡಿದ ಅವರು, ಸತತವಾಗಿ ಈ ರೀತಿ ಘಟನೆಗಳು ನಡೆದಾಗ ದರ್ಶನ್ ಅವರು ಸಲಹೆ ಮತ್ತು ಚಿಕಿತ್ಸೆ ಅಥವಾ ಸಹಾಯ ತೆಗೆದುಕೊಳ್ಳಬೇಕು. ದರ್ಶನ್ ಗೆ ಯಾರದೋ ಒಬ್ಬರ ಸಹಾಯದ ಅವಶ್ಯಕತೆ ಇದೆ. ಇನ್ನೂ ದರ್ಶನ್ ನಡೆಸಿರುವ ಹಲ್ಲೆಗಳ ಕುರಿತು ದಾಖಲೆಗಳಿವೆ. ಅದನ್ನು ಎಲ್ಲಿಗೆ ತಲುಪಿಸಬೇಕು? ಅಲ್ಲಿಗೆ ತಲುಪಿಸುತ್ತೇನೆ ಎಂದು ಇಂದ್ರಜಿತ್ ಹೇಳಿದ್ದಾರೆ.