ದರ್ಶನ್ ಹಿಂಬಾಲಕರಿಂದ ಕೊಲೆ ಬೆದರಿಕೆ – ಇಂದ್ರಜಿತ್ ದೂರು
ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಹೊಟೆಲ್ ಸಿಬ್ಬಂದಿ ಮೇಲೆ ಹಲ್ಲೆಯ ಗಂಭೀರ ಆರೋಪ ಮಾಡಿ ಬಳಿಕ ದರ್ಶನ್ ವಿರುದ್ಧ ಮಾಧ್ಯಮದವರ ಮುಂದೆ ವಾಗ್ದಾಳಿ ನಡೆಸುತ್ತಾ ಇರುವ ನಿರ್ದೇಶಕ , ನಿರ್ಮಾಪಕ , ಪತ್ರಕರ್ತ ಇಂದ್ರಜಿತ್ ಲಂಕೇಶ್ ಇದೀಗ ದರ್ಶನ್ ಅಭಿಮಾನಿಗಳು ರೌಡಿಗಳಿಂದ ಕೊಲೆ ಬೆದರಿಕೆ ಬರುತ್ತಿರೋದಾಗಿ ದೂರು ಸಲ್ಲಿಸಿದ್ದಾರೆ..
ನಟ ದರ್ಶನ್ ಹಿಂಬಾಲಕರು ಹಾಗೂ ರೌಡಿಗಳು ತಮಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಇಂದ್ರಜಿತ್ ಆರೋಪಿಸಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್, ನನಗೆ ಕಳೆದ 24 ಗಂಟೆಗಳಲ್ಲಿ ಸತತವಾಗಿ ಬೆದರಿಕೆ ಕರೆಗಳು, ವಾಟ್ಸ್‌ಆಪ್ ಸಂದೇಶಗಳು ಬರುತ್ತಲೇ ಇವೆ. 20-30 ಮೊಬೈಲ್ ಸಂಖ್ಯೆಗಳಿಂದ ಕೊಲೆ ಬೆದರಿಕೆಗಳು ಬಂದಿವೆ. ಹಾಗಾಗಿ ಸೈಬರ್ ಕ್ರೈಂಗೆ ದೂರು ನೀಡಲಿದ್ದೇನೆ ಎಂದಿದ್ದಾರೆ. ವಾಟ್ಸ್‌ಆಪ್ ಮೂಲಕ ಅಶ್ಲೀಲ ಚಿತ್ರಗಳನ್ನು ಕಳಿಸುವುದು, ಅಶ್ಲೀಲ ಸಂದೇಶಗಳು, ಕೆಟ್ಟ ಪದಗಳನ್ನು ಬಳಸಿ ಬೈಯ್ಯುವುದು, ಕರೆ ಮಾಡಿ ಬೆದರಿಕೆ ಹಾಕುವುದು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನೀಲಿ ಚಿತ್ರ ನಿರ್ಮಾಣ – ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್…!
ಅಲ್ಲದೇ ನನಗೆ ಕಾಲ್ ಮಾಡುತ್ತಿರುವವರಿಗೆ, ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಿರುವವರಿಗೆ ಪಾಠ ಕಲಿಸದೇ ಬಿಡಲ್ಲ. ಇಂಥಹ ಬೆದರಿಕೆಗಳು ನನಗೆ ಹೊಸದೇನೂ ಅಲ್ಲ. ಇಂಥಹ ಬೆದರಿಕೆಗಳನ್ನು ಹಲವು ವರ್ಷಗಳಿಂದಲೂ ನೋಡುತ್ತಾ ಬಂದಿದ್ದೇನೆ. ಇವರನ್ನು ಸುಮ್ಮನೆ ಬಿಡಲ್ಲ. ಸೈಬರ್ ಠಾಣೆಗೆ ದೂರು ನೀಡುತ್ತೇನೆ ಎಂದಿದ್ದಾರೆ. ನಟ ದರ್ಶನ್, ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಕೆಲ ದಿನಗಳ ಹಿಂದೆ ಹೋಟೆಲ್ ಸಪ್ಲೈಯರ್ ಒಬ್ಬರ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಲಂಕೇಶ್ ಆರೋಪಿಸಿದ್ದರು. ಇದಕ್ಕೆ ದರ್ಶನ್ ಖಾರವಾಗಿ ಉತ್ತರ ನೀಡಿದ್ದು, ಡಿ ಬಾಸ್ ಅಭಿಮಾನಿಗಳು ಸಹ ಇಂದ್ರಜಿತ್ ವಿರುದ್ಧ ಆಕ್ರೋಶಗೊಂಡಿದ್ದಾರೆ.