ಸಣ್ಣ ಮೀನು ಹಿಡಿದಿದ್ದಾರೆ ಇನ್ನೂ ತಿಮಿಂಗಿಲಗಳಿವೆ : ಇಂದ್ರಜಿತ್ ಲಂಕೇಶ್
ಬೆಂಗಳೂರು : ಡ್ರಗ್ಸ್ ಕೇಸ್ ನಲ್ಲಿ ಸಣ್ಣ ಮೀನುಗಳನ್ನು ಹಿಡಿದಿದ್ದಾರೆ. ಇದರಲ್ಲಿ ಇನ್ನೂ ತಮಿಂಗಿಲಗಳವೆ. ಈ ಕುರಿತು ತನಿಖೆ ನಡೆಸಬೇಕು ಎಂದು ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ರಾಜ್ಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ ಇದೀಗ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಸದ್ಯ ಜಾಮೀನಿನ ಮೇಲೆ ಹೊರಗಿರುವ ನಟಿಯರಿಬ್ಬರೂ ಡ್ರಗ್ಸ್ ಸೇವನೆ ಮಾಡಿರೋದು ಎಫ್ ಎಸ್ ಎಲ್ ವರದಿಯಲ್ಲಿ ದೃಢವಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಂದ್ರಜಿತ್ ಲಂಕೇಶ್ ಅವರು, ತನಿಖೆಯಾಗಿ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ.
ಈ ಪ್ರಕರಣವನ್ನು ತನಿಖೆ ಮಾಡಿದ ಸಿಸಿಬಿ ತಂಡ ರಿಪೋರ್ಟ್ ಸಲ್ಲಿಸಿದ್ದಾರೆ. ತಂಡದ ತನಿಖೆಗೆ ಬೆನ್ನು ತಟ್ಟಲೇ ಬೇಕು ಎಂದು ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ದೃಷ್ಟಿಯಿಂದ ಈ ಡ್ರಗ್ಸ್ ಜಾಲ ಕುರಿತಾಗಿ ಇನ್ನಷ್ಟು ತನಿಖೆ ಮಾಡಬೇಕು. ಸಣ್ಣ ಮೀನು ಹಿಡಿದಿದ್ದಾರೆ, ತಿಮಿಂಗಿಲಗಳಿವೆ ಬೆಂಗಳೂರು, ಕರ್ನಾಟಕದಲ್ಲಿ ದೊಡ್ಡ ಮಾಫಿಯವಾಗಿದೆ ಈ ಕುರಿತಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ ಇಂದ್ರಜಿತ್ ಲಂಕೇಶ್, ನನಗೆ ಈ ವಿಚಾರವಾಗಿ ಸಂತೋಷವಾಗಿದೆ.
ನಾನು ಗೆದ್ದಿದ್ದೇನೆ, ನನ್ನ ಹೇಳಿಕೆ ನಿಜವಾಯಿತು ಎಂದು ಹೇಳಲು ನಾನು ಬಂದಿಲ್ಲ. ಈ ಕುರಿತಾಗಿ ಒಂದು ದೊಡ್ಡ ಮಾಫಿಯಾ ಇದೆ ತನಿಖೆಯಾಗಬೇಕಿದೆ. ಸಮಾಜ ಸ್ವಚ್ಛವಾಗಬೇಕು ಎಂದರು.









