ಚಿಕ್ಕಬಳ್ಳಾಪುರ Chikkaballapura ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳಿಗೆ ಸೋಂಕು
ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಕೊರೊನಾ ಎರಡನೆ ಅಲೆಯ ಆರ್ಭಟ ಮುಂದುವರೆದಿದ್ದು, ಇದೀಗ ಖೈದಿಗಳಿಗೂ ಸೋಂಕು ವ್ಯಾಪಿಸುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದ 7 ಜನ ಜನರಿಗೆ ಸೋಂಕು ತಗುಲಿದ್ದು, ಜೈಲು ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.
ಅಣಕನೂರು ಗ್ರಾಮದ ಬಳಿ ಜಿಲ್ಲಾ ಕಾರಾಗೃಹ ಇದ್ದು, ಇದರಲ್ಲಿರುವ 7 ಮಂದಿ ಖೈದಿಗಳಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ಇತರೆ ಖೈದಿಗಳು ಹಾಗೂ ಜೈಲು ಸಿಬ್ಬಂದಿಗೆ ಢವಢವ ಶುರುವಾಗಿದೆ.
ನಿನ್ನೆ ಜಿಲ್ಲೆಯಲ್ಲಿ ಬರೋಬ್ಬರಿ 471 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯಲ್ಲಿ ಈಗ 1998 ಸಕ್ರಿಯ ಪ್ರಕರಣಗಳಿವೆ.










