ಚಂದ್ರಯಾನ -2 ರ ಆರಂಭಿಕ ದತ್ತಾಂಶ ಬಿಡುಗಡೆ
ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ -2ರ ಆರಂಭಿಕ ದತ್ತಾಂಶವನ್ನು ಜನರಿಗಾಗಿ ಬಿಡುಗಡೆ ಮಾಡಿದೆ.
ಎಲ್ಲಾ ಪ್ರಯೋಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಈಗ ಲಭ್ಯವಿರುವ ದತ್ತಾಂಶವು ಉಡಾವಣೆಯ ಪೂರ್ವದಲ್ಲಿದ್ದ ಭರವಸೆಗಳನ್ನು ಈಡೇರಿಸುವ ಅತ್ಯುತ್ತಮ ಸಾಮಥ್ರ್ಯವನ್ನು ಸೂಚಿಸುತ್ತದೆ ಎಂದು ಇಸ್ರೋ ಹೇಳಿದೆ.
ನಗರದ ಬ್ಯಾಲಾಳುನಲ್ಲಿರುವ ಭಾರತೀಯ ಬಾಹ್ಯಾಕಾಶ ವಿಜ್ಞಾನ ದತ್ತಾಂಶ ಕೇಂದ್ರದಲ್ಲಿ ಚಂದ್ರಯಾನ -2 ಮಿಷನ್ನ ಡೇಟಾ ಸಂಗ್ರಹಿಸಿಡಲಾಗಿದೆ.
2019ರ ಜುಲೈ 22 ರಂದು ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ -2 ಉಪಕರಣಗಳನ್ನು ಹೊತ್ತ ರಾಕೆಟ್ ಅನ್ನು ಉಡಾವಣೆ ಮಾಡಲಾಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









