ಬೆನ್ನಿಗೆ ಚುಚ್ಚಿದ ಗಾಯದಿಂದ ರಕ್ತ ಸುರಿಯುತ್ತಿದ್ದರೂ ಔಪಚಾರಿಕತೆ ಪೂರ್ಣಗೊಳಿಸಿದ ಪೊಲೀಸರು injured man police
ಜಬಲ್ಪುರ, ಅಕ್ಟೋಬರ್18: ಪೊಲೀಸ್ ಠಾಣೆಯೊಳಗೆ ವ್ಯಕ್ತಿಯೊಬ್ಬ ಬೆನ್ನಿಗೆ ಚುಚ್ಚಿದ ಚಾಕುವಿನಿಂದ ನಿಂತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿದ್ದು ಮಧ್ಯಪ್ರದೇಶ ಪೊಲೀಸರು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. injured man police
ಗಾಯಗೊಂಡ ವ್ಯಕ್ತಿಯನ್ನು ನಿಲ್ಲಿಸಿಕೊಂಡು ಪೊಲೀಸ್ ಠಾಣೆಯೊಳಗೆ ಪೊಲೀಸ್ ಅಧಿಕಾರಿಗಳು ಕಾನೂನುಬದ್ಧ ಔಪಚಾರಿಕತೆಯನ್ನು ಪೂರ್ಣಗೊಳಿಸಿದ್ದರು.
ಈ ಘಟನೆ ಜಬಲ್ಪುರದಿಂದ ಬೆಳಕಿಗೆ ಬಂದಿದ್ದು, ವ್ಯಕ್ತಿಯೊಬ್ಬರು ಗಾಯಗೊಂಡಿದ್ದ ಸ್ಥಿತಿಯಲ್ಲಿ ಪೊಲೀಸ್ ಠಾಣೆಗೆ ತಲುಪಿದ್ದಾರೆ. ಬೆನ್ನಿಗೆ ಚಾಕುವಿನಿಂದ ಇರಿತಕ್ಕೊಳಗಾಗಿದ್ದ ವ್ಯಕ್ತಿ ಗರ್ಹಾ ಪೊಲೀಸ್ ಠಾಣೆಗೆ ಬಂದಾಗ ಸಾಕಷ್ಟು ರಕ್ತವನ್ನು ಕಳೆದುಕೊಂಡಿದ್ದರು.
ಭಾರತದಲ್ಲಿ ಕೋವಿಡ್ ಲಸಿಕೆಗಾಗಿ 300 ಮಿಲಿಯನ್ ಜನರ ಆಯ್ಕೆ ಪ್ರಕ್ರಿಯೆ ಪ್ರಾರಂಭ
ಆದರೆ ಪೊಲೀಸರು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವ ಬದಲು, ಕಾನೂನುಬದ್ಧ ವಿಧಿಗಳನ್ನು ಪೂರ್ಣಗೊಳಿಸುವಲ್ಲಿ ನಿರತರಾಗಿದ್ದರು.
ಪೊಲೀಸರಿಗೆ ಪ್ರಮುಖವಾದ ವಿಷಯ ಯಾವುದು ?
ಬೆನ್ನಿಗೆ ಚಾಕುವಿನಿಂದ ಇರಿತಕ್ಕೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದೇ ಅಥವಾ ಗಾಯದಿಂದ ರಕ್ತ ಸುರಿಯುತ್ತಿದ್ದರೂ ಔಪಚಾರಿಕತೆಗಳನ್ನು ಪೂರ್ಣಗೊಳಿಸುವುದೇ ಎಂದು ಪೊಲೀಸರಿಗೆ ಜನರು ಪ್ರಶ್ನೆ ಹಾಕಿದ್ದಾರೆ.
ಕಾಮಧೇನು ಆಯೋಗದಿಂದ ಗೋವಿನ ಸಗಣಿಯ ಚಿಪ್ ಅನಾವರಣ – ಮಾಹಿತಿ ಕೋರಿ ವಿಜ್ಞಾನಿಗಳ ಪತ್ರ
ಮದ್ಯ ಸೇವಿಸಿದ್ದ ಮತ್ತೊಬ್ಬ ಯುವಕ ಗೋಲು ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದ ಸೋನು ಎಂಬಾತ ಗಾಯಗೊಂಡ ವ್ಯಕ್ತಿ ಎಂದು ಪೊಲೀಸ್ ಅಧಿಕಾರಿಗಳು ಗುರುತಿಸಿದ್ದಾರೆ. ಅಕ್ಟೋಬರ್ 16 ಮತ್ತು ಅಕ್ಟೋಬರ್ 17 ರ ಮಧ್ಯ ರಾತ್ರಿ ಸೋನು ವಾಕ್ ಮಾಡಲು ಹೊರಟಿದ್ದಾಗ ಗೋಲು ತನ್ನ ಸಹಚರರೊಂದಿಗೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ಚಾಕುವಿನಿಂದ ಹಲ್ಲೆ ಮಾಡಿದ.
ಚಾಕುವನ್ನು ಸೋನು ಬೆನ್ನಿಗೆ ಎಸೆದಾಗ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ಗದ್ದಲವನ್ನು ಕೇಳಿ ಆತನ ರಕ್ಷಣೆಗೆ ಧಾವಿಸಿದ್ದರು. ಆಗ ಆರೋಪಿ ಮತ್ತು ಆತನ ಸಹಚರರು ಸ್ಥಳದಿಂದ ಪರಾರಿಯಾಗಿದ್ದರು.
ಈ ಸಂಬಂಧ ಮಧ್ಯಪ್ರದೇಶದ ಜಬಲ್ಪುರದ ಗರ್ಹಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ