ಸಾಮಾಜಿಕ ಅಂತರದೊಂದಿಗೆ ನವೀನ ರೀತಿಯ ವಿವಾಹ ಅರಿಶಿನ ಶಾಸ್ತ್ರ
ಲುಧಿಯಾನ, ಅಕ್ಟೋಬರ್02: ಕೊರೋನಾ ಸೋಂಕು ದೇಶದಲ್ಲಿ ಕಡಿಮೆಯಾಗದೇ ಇದ್ದರೂ ಸೋಂಕು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಕೊರೋನಾ ಜೊತೆಗೆ ಬದುಕಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ.
ಕೋವಿಡ್-19 ಸೋಂಕಿನಿಂದ ದೂರವಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಆಗಾಗ್ಗೆ ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಇತ್ಯಾದಿ ಪ್ರೋಟೋಕಾಲ್‌ಗಳನ್ನು ಅನುಸರಿಸಿಕೊಂಡು ಬದುಕಬೇಕಾಗಿದೆ. ಇದೀಗ ಈ ಸಮಯದಲ್ಲಿ ಮದುವೆಯಾಗುತ್ತಿರುವ ಜನರು ಕೂಡ ವಿವಾಹದ ಸಮಯದಲ್ಲಿ ಆಚರಿಸುವ ಕೆಲವು ಮದುವೆ ಸಂಪ್ರದಾಯಕ್ಕೆ ನವೀನ ವಿಧಾನಗಳ ಮೊರೆಹೋಗಿದ್ದಾರೆ.
ಪಡಿತರ ಚೀಟಿಯನ್ನು ಆಧಾರ್ ಗೆ ಲಿಂಕ್ ಮಾಡಿದ್ದೀರಾ? ಇಲ್ಲ ಎಂದಾದರೆ ಈ ಮಾಹಿತಿ ಓದಿ
ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆಸಿದ ವಿವಾಹದ ಸಮಯದಲ್ಲಿ ನಡೆಸುವ ಅರಿಶಿನ ಶಾಸ್ತ್ರದ ವೀಡಿಯೊವೊಂದು ಬಾರಿ ವೈರಲ್ ಆಗಿದೆ.
ಈ ಸಮಾರಂಭದ ವೀಡಿಯೊದ ಕ್ಲಿಪ್ ಅನ್ನು ಹರ್ಜಿಂದರ್ ಸಿಂಗ್ ಕುಕ್ರೇಜಾ ಎಂಬುವವರು ಹಂಚಿಕೊಂಡಿದ್ದಾರೆ. ಅದಕ್ಕೆ ಸಾಮಾಜಿಕ ಅಂತರದೊಂದಿಗೆ ನವೀನ ರೀತಿಯ ಅರಿಶಿನ ಶಾಸ್ತ್ರ ಎಂಬ ಅಡಿಬರಹವನ್ನು ನೀಡಿದ್ದಾರೆ.
ಅತ್ಯುತ್ತಮ ರೋಗನಿರೋಧಕ ಶಕ್ತಿಯ ಈರುಳ್ಳಿ ಚಹಾದ ಮತ್ತಷ್ಟು ಆರೋಗ್ಯ ಪ್ರಯೋಜನಗಳು
ಇದು ಭಾರತದಲ್ಲಿ ವಿವಾಹದ ಮೊದಲು ನಡೆಯುವ ಸಮಾರಂಭವಾಗಿದ್ದು, ಸುಮಂಗಲಿಯರು ಅರಿಶಿನ, ಎಣ್ಣೆ ಮತ್ತು ಹಾಲನ್ನು ವಧು ಮತ್ತು ವರರಿಗೆ ಅನ್ವಯಿಸುತ್ತಾರೆ.
ಈ ಮಿಶ್ರಣವು ವಿವಾಹದ ಮೊದಲು ವಧು ಮತ್ತು ವರರಿಗೆ ಆಶೀರ್ವದಿಸುತ್ತದೆ ಎಂದು ನಂಬಲಾಗಿದೆ.
ಲುಧಿಯಾನದಲ್ಲಿ ನಡೆದ ಅರಿಶಿನ ಶಾಸ್ತ್ರದ ಸಮಾರಂಭದ 13 ಸೆಕೆಂಡುಗಳ ಈ ವಿಡಿಯೋದಲ್ಲಿ ವಧುವಿಗೆ ಅರಿಶಿನ ಹಚ್ಚುವುದನ್ನು ತೋರಿಸಲಾಗಿದೆ.
https://twitter.com/SinghLions/status/1310671385274982401?s=19
ಸಂಬಂಧಿಯೊಬ್ಬರು ವಧುವಿನ ಮೇಲೆ ಅರಿಶಿನವನ್ನು ಅನ್ವಯಿಸಲು ಉದ್ದವಾದ ಬಣ್ಣದ ರೋಲರ್ ಅನ್ನು ಬಳಸಿದ್ದಾರೆ. ಈ ರೀತಿಯಾಗಿ ಅವರು ಪರಸ್ಪರ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿದ್ದಾರೆ ಮತ್ತು ಸಮಾರಂಭದ ಮೋಜನ್ನು ಹಂಚಿಕೊಂಡಿದ್ದಾರೆ.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








