ಗುಜರಿ ಸೇರಲಿರುವ 30 ವರ್ಷಗಳ ಕಾಲ ಭಾರತೀಯ ನೌಕಾಪಡೆಗೆ ಸೇವೆ ಸಲ್ಲಿಸಿದ ಐಎನ್‌ಎಸ್ ವಿರಾಟ್ ನೌಕೆ
ಮುಂಬೈ, ಅಗಸ್ಟ್ 30: 30 ವರ್ಷಗಳ ಕಾಲ ಭಾರತೀಯ ನೌಕಾಪಡೆಗೆ ಸೇವೆ ಸಲ್ಲಿಸಿ ಮೂರು ವರ್ಷಗಳ ಹಿಂದೆ ನಿವೃತ್ತಿ ಗೊಂಡ ಐಎನ್‌ಎಸ್ ವಿರಾಟ್ ನೌಕೆಯನ್ನು, ಮುಂಬೈಯಿಂದ ಗುಜರಾತ್‌ನ ಭಾವನಗರ ಜಿಲ್ಲೆಯ ಅಲಂಗ್ ಗೆ ಸ್ಥಳಾಂತರಿಸಿ ಮುಂದಿನ ತಿಂಗಳು ಅದರ ಭಾಗಗಳನ್ನು ಕಿತ್ತು ಸ್ಕ್ರ್ಯಾಪ್ ಆಗಿ ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
![]()
1959ರ ನವೆಂಬರ್ 18 ರಂದು ಮೊದಲ ಬಾರಿಗೆ ಬ್ರಿಟಿಷ್ ರಾಯಲ್ ನೇವಿ ಹೆಚ್‌ಎಂಎಸ್ ಹಮ್ಸ್ ಹೆಸರಿನಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿತ್ತು. ಭಾರತೀಯ ಸೇನೆ ಬಳಿಕ ನೌಕೆಗೆ ಐಎನ್‌ಎಸ್ ವಿರಾಟ್ ಎಂದು ಮರು ನಾಮಕರಣ ಮಾಡಿ ಸೇನೆಗೆ ನಿಯೋಜಿಸಿತು. ನೌಕೆಯ ನಿರ್ವಹಣೆ ದುಬಾರಿಯಾಗುತ್ತಿದ್ದ ಹಿನ್ನಲೆಯಲ್ಲಿ 2017 ಮಾರ್ಚ್ ನಲ್ಲಿ ನೌಕೆಯನ್ನು ನಿವೃತ್ತಿಗೊಳಿಸಲು ನಿರ್ಧರಿಸಲಾಯಿತು.
ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್ ಲಿಮಿಟೆಡ್ ಕಳೆದ ತಿಂಗಳು ನಡೆಸಿದ ಹರಾಜಿನಲ್ಲಿ 1987 ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಯುದ್ಧನೌಕೆ ಅತಿ ಹೆಚ್ಚು ಅಂದರೆ 38.54 ಕೋಟಿ ರೂ. ಗೆ ಹರಾಜಾಗಿದೆ.

ಮುಂಬೈನ ನೇವಲ್ ಡಾಕ್ ಯಾರ್ಡ್ ನಿಂದ ಮುಂದಿನ ತಿಂಗಳು ಅಲಾಂಗ್ ನಲ್ಲಿ ಬ್ರೇಕಿಂಗ್ ಯಾರ್ಡ್ ಗೆ ಸಾಗಿಸಲಾಗುವುದು ಎಂದು ಕಂಪನಿಯ ಅಧ್ಯಕ್ಷ ಮುಖೇಶ್ ಪಟೇಲ್ ಹೇಳಿದ್ದಾರೆ.
ನಾವು ಸಂಪೂರ್ಣ ಪಾವತಿ ಮಾಡಿದ್ದೇವೆ ಮತ್ತು ಸರ್ಕಾರದಿಂದ ವಿತರಣಾ ಆದೇಶವನ್ನು ಸ್ವೀಕರಿಸಿದ್ದೇವೆ. ಆದ್ದರಿಂದ, ಮಾನ್ಸೂನ್ ಸ್ಥಿತಿಯನ್ನು ಅವಲಂಬಿಸಿ, ಡೈರೆಕ್ಟರೇಟ್ ಜನರಲ್ ಆಫ್ ಶಿಪ್ಪಿಂಗ್‌ನಿಂದ ಅಗತ್ಯ ಅನುಮತಿ ಪಡೆದ ನಂತರ ಸೆಪ್ಟೆಂಬರ್ ಮಧ್ಯ ಅಥವಾ ಅಂತ್ಯದ ವೇಳೆಗೆ, ಅದನ್ನು ಈಗ ನಿಂತಿರುವ ಮುಂಬೈನ ನೇವಲ್ ಡಾಕ್ ಯಾರ್ಡ್‌ನಿಂದ ಅಲಾಂಗ್‌ಗೆ ಕರೆತರೆಲಾಗುವುದು. ಮುಂಬೈಯಿಂದ ಅಲಾಂಗ್‌ಗೆ ಹಡಗನ್ನು ತರಲು ಸುಮಾರು ಮೂರು ದಿನಗಳು ಬೇಕಾಗುತ್ತದೆ ಎಂದು ಪಟೇಲ್ ಹೇಳಿದರು.
30 ವರ್ಷಗಳ ಕಾಲ ಸೇವೆಯಲ್ಲಿದ್ದು, ಮಾರ್ಚ್ 2017 ರಲ್ಲಿ ನಿವೃತ್ತಿಗೊಂಡ ಎರಡನೇ ಸೆಂಟೌರ್-ಕ್ಲಾಸ್ ವಿಮಾನವಾಹಕ ನೌಕೆಯಾದ ಐಎನ್ಎಸ್ ವಿರಾಟ್ ಅನ್ನು ಸಮುದ್ರದಾಳದ ಸ್ಮಾರಕವಾಗಿ ಪರಿವರ್ತಿಸುವ ಪ್ರಸ್ತಾವನೆ ಕೂಡ ಈ ಹಿಂದೆ ಇದ್ದವು. ಕಳೆದ ವರ್ಷ ಜುಲೈನಲ್ಲಿ, ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ವಿರಾಟ್ ನೌಕೆಯನ್ನು ಭಾರತೀಯ ನೌಕಾಪಡೆಯ ಅನುಮತಿಯೊಂದಿಗೆ ಗುಜರಿಗೆ ಹಾಕಲಾಗುವುದು ಎಂದು ಪ್ರಕಟಿಸಿತ್ತು.

ಈ ಮೊದಲು ಐಎನ್‌ಎಸ್ ವಿರಾಟ್ ನೌಕೆ, ರಾಯಲ್ ಬ್ರಿಟಿಷ್ ನೌಕಾಪಡೆ ಪರವಾಗಿ 1982 ರಲ್ಲಿ ಅರ್ಜೆಂಟೀನಾ ವಿರುದ್ಧ ಫಾಕ್ಲ್ಯಾಂಡ್ಸ್ ಯುದ್ಧವನ್ನು ಗೆದ್ದಿತ್ತು. ಇದು ಸುಮಾರು 27,800 ಟನ್ ತೂಕವಿದ್ದು, ಬ್ರಿಟಿಷ್ ನೌಕಾಪಡೆಯಲ್ಲಿ ನವೆಂಬರ್ 1959 ರಿಂದ ಏಪ್ರಿಲ್ 1984 ರವರೆಗೆ ಎಚ್‌ಎಂಎಸ್ ಹರ್ಮ್ಸ್ ಆಗಿ ಸೇವೆ ಸಲ್ಲಿಸಿತು ಮತ್ತು ನವೀಕರಣದ ನಂತರ ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು. 80 ರ ದಶಕದ ಉತ್ತರಾರ್ಧದಲ್ಲಿ, ಭಾರತೀಯ ನೌಕಾಪಡೆ ಇದನ್ನು 65 ಮಿಲಿಯನ್ ಯುಎಸ್ಡಿ ವೆಚ್ಚದಲ್ಲಿ ಖರೀದಿಸಿತು ಮತ್ತು ಅದನ್ನು ಮೇ 12, 1987 ರಂದು ಮರು ನಿಯೋಜಿಸಲಾಯಿತು.








